ಬೆಂಗಳೂರು: ಕೇಂದ್ರ ಸರ್ಕಾರದ ತ್ರಿಭಾಷಾ ಸೂತ್ರ ಹೇರಿಕೆಯನ್ನು ಶಾಶ್ವತವಾಗಿ ಖಂಡಿಸಿ ಹಿಂದಿ ಹೇರಿಕೆ ವಿರೋಧಿ ಒಕ್ಕೂಟದ ವತಿಯಿಂದ ಬೆಂಗಳೂರಿನ ಪುರಭವನದ ಎದುರು ಜೂನ್ 6ರಂದು (ಗುರುವಾರ) ಪ್ರತಿಭಟನೆ ನಡೆಸಲು ಕನ್ನಡಪರ ಸಂಘಟನೆಗಳು ಮುಂದಾಗಿದೆ.
ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಮೂಲಕ ದಕ್ಷಿಣ ಭಾರತದ ರಾಜ್ಯಗಳಿಗೆ ಹಿಂದಿ ಹೇರಲು ಹೊರಟಿದ್ದ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಕ್ರಮ ಖಂಡಿಸಿ ಕರ್ನಾಟಕ, ತಮಿಳುನಾಡು, ಕೇರಳದ ಜನತೆ ತೀವ್ರ ಖಂಡನೆ ವ್ಯಕ್ತಪಡಿಸಿದ್ದರು, ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಪ್ರತಿರೋಧದ ಅಲೆ ಎದ್ದಿತ್ತು.
ಇದನ್ನು ಗಮನಿಸಿ ಕೇಂದ್ರ ಸರ್ಕಾರ ಸದ್ಯ ವಿದಾದಿತ ಕರಡು ನೀತಿ ಬದಲಿಸಿದೆ. ಆದರೆ ಮತ್ತೆ ಮುಂದೆ ಎಂದು ಬೇಕಾದರೂ ತ್ರಿಭಾಷಾ ಸೂತ್ರ ಹೇರಿಕೆಗೆ ಕೇಂದ್ರ ಒತ್ತಡ ಹಾಕಬಹುದು, ಇದರ ಶಾಶ್ವತವಾಗಿ ತಡೆ ಕೋರಿ ಹಾಗೂ ಕನ್ನಡಿಗರು ಸಹ ತಮ್ಮ ಪ್ರತಿರೋಧವನ್ನು ಬಲವಾಗಿಯೇ ಕೇಂದ್ರ ಸರ್ಕಾರಕ್ಕೆ ಮುಟ್ಟಿಸಬೇಕೆಂಬ ಉದ್ದೇಶದಿಂದ ಕನ್ನಡ ಪರ ಹೋರಾಟದ ಸಮೂಹಗಳು ಒಂದಾಗಿ ಪ್ರತಿಭಟನೆ ನಡೆಸಲು ಸಜ್ಜಾಗಿದೆ.
ಈ ಸಂಬಂಧ ಕರ್ನಾಟಕದ ಎಲ್ಲಾ ಕನ್ನಡಪರ, ರೈತಪರ, ಕಾರ್ಮಿಕ, ಮಹಿಳಾಪರ, ಯುವಜನ ಪರ ಸಂಘಟನೆಗಳು, ಕಲಾವಿದರು, ಸಾಹಿತಿಗಳು, ಪತ್ರಕರ್ತರು, ವಿದ್ಯಾರ್ಥಿಗಳು, ಐಟಿ ಉದ್ಯೋಗಿಗಳು ಸರ್ವರನ್ನು ಒಳಗೊಂಡು “ಹಿಂದಿ ಹೇರಿಕೆ ವಿರೋಧಿ ಒಕ್ಕೂಟ” ರಚಿಸಿ ಕನ್ನಡಿಗರ ಪ್ರತಿರೋಧ ದಾಖಲಿಸಲು ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಸಾಹಿತ್ಯ ಪರಿಷತ್ತು ಸೇರಿದಂತೆ ಹಲವು ಸಂಘಟನೆಗಳು ತೀರ್ಮಾನಿಸಿದೆ.
ಪ್ರತಿಭಟನೆಗೆ ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡಿಗರು ಭಾಗವಹಿಸುವ ಮೂಲಕ ಹಿಂದಿ ಹೇರಿಕೆಯನ್ನು ಶಾಶ್ವತವಾಗಿ ಪ್ರತಿರೋಧಿಸಬೇಕು ಎಂದು ಆಯೋಜಕರು ಮನವಿ ಮಾಡಿದ್ದಾರೆ.
ಮೊದಲು ಶಿಫಾರಸಿನ ಮುಖ್ಯಾಂಶಗಳನ್ನು ಕನ್ನಡ ಕ್ಕೆ ತಂದು ಜನಗಳಿಗೆ ತಿಳುವಳಿಕೆ ಮೂಡಿಸಬೇಕು. ಹಿಂದಿಯ ಜೊತೆಗೆ ಪ್ರತಿಭಟಿಸಬೇಕಾದ ಅನೇಕ ಅಂಶಗಳಿವೆ