ಅಲೀಗಢ: ಕೇವಲ ಐದು ಸಾವಿರ ಸಾಲದ ಹಣಕ್ಕಾಗಿ ಎರಡೂವರೆ ವರ್ಷದ ಮಗುವನ್ನು ಬರ್ಬರವಾಗಿ ಹಲ್ಲೆ ನಡೆಸಿ ಕೊಂದಿದ್ದೂ ಅಲ್ಲದೆ ರಸ್ತೆ ಬದಿ ಎಸೆದು ಪೈಶಾಚಿ ಕೃತ್ಯ ಮೆರೆದ ಘಟನೆ ಉತ್ತರ ಪ್ರದೇಶದ ಅಲೀಗಢದಲ್ಲಿ ನಡೆದಿದೆ.
ಮೃತ ಮಗುವಿನ ಕುಟುಂಬಸ್ಥರು ಐದು ಸಾವಿರ ರೂಪಾಯಿ ಸಾಲ ಮಾಡಿಕೊಂಡಿದ್ದರು. ಈ ಸಾಲ ತೀರಿಸುವ ಸಂಬಂಧ ಸಾಲಗಾರರಿಗೂ ಕುಟುಂಬದವರಿಗೂ ವಾಗ್ವಾದ ನಡೆದಿದೆ. ಇದರಿಂದ ಕೋಪಗೊಂಡ ಸಾಲಗಾರರು ಎರಡೂವರೆ ವರ್ಷದ ಮಗುವನ್ನು ಬರ್ಬರವಾಗಿ ಕೊಲೆ ಮಾಡಿ ತಪ್ಪಲು ಪ್ರದೇಶದಲ್ಲಿ ಎಸೆದಿದ್ದಾರೆ. ಮಗುವಿನ ದೇಹದ ಬಳಿ ಬೀದಿ ನಾಯಿಗಳು ಅಡ್ಡಾಡಿದಾಗ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.
ಘಟನೆ ಸಂಬಂಧ ಜಹೀದ್ ಹಾಗೂ ಅಸಲಾಂ ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ಪೋಷಕರ ದೂರಿಗೆ ಸರಿಯಾಗಿ ಸ್ಪಂದಿಸದ ಹಿನ್ನೆಲೆಯಲ್ಲಿ, ಓರ್ವ ಇನ್ಸ್ ಪೆಕ್ಟರ್, ಮೂವರು ಸಬ್ ಇನ್ಸ್ ಪೆಕ್ಟರ್ ಮತ್ತು ಓರ್ವ ಕಾನ್ಸ್ ಟೇಬಲ್ ಸೇರಿದಂತೆ ಐವರು ಪೊಲೀಸರನ್ನು ಅಮಾನತು ಮಾಡಲಾಗಿದೆ ಪೊಲೀಸರು ಮಾಹಿತಿ ನೀಡಿದ್ದಾರೆ.
“ಘಟನೆ ಸಂಬಂಧ ಮೇ 31ರಂದು ಅಪಹರಣ ಪ್ರಕರಣವನ್ನು ದಾಖಲಿಸಲಾಗಿದೆ. ಆರೋಪಿಗಳನ್ನು ಬಂಧಿಸಿದ್ದು ಅವರು ತಪ್ಪೆಸಗಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ. ವೈಯಕ್ತಿಕ ದ್ವೇಷದಿಂದ ಘಟನೆ ಸಂಭವಿಸಿದ್ದು, ಅತ್ಯಾಚಾರವಾಗಿರುವ ಯಾವುದೇ ಸುಳಿವು ಸಿಕ್ಕಿಲ್ಲ. ಇದೀಗ ಆರೋಪಿಗಳು ಜೈಲಿನಲ್ಲಿದ್ದಾರೆ. ಪ್ರಕರಣವನ್ನು ಎನ್ ಸ್ ಎ ಎಂದು ಪರಿಗಣಿಸಿ ತನಿಖೆ ನಡೆಸಲಾಗುತ್ತಿದೆ. ಘಟನೆ ಸಂಬಂಧ ಐವರು ಪೊಲೀಸರನ್ನು ಅಮಾನತು ಮಾಡಲಾಗಿದೆ. ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ’’ ಎಂದು ಅಲೀಗಢ ಎಸ್ ಎಸ್ ಪಿ ಆಕಾಶ್ ಕುಲ್ಹಾರಿ ಮಾಹಿತಿ ನೀಡಿದ್ದಾರೆ.
Akash Kulhary, SSP Aligarh on 2.5-year-old girl death case: We are proceeding with it as an NSA case, we'll try to get it to a fast track court. There is no mention of rape or acid in postmortem report. 2 accused have been arrested, 5 police officials have been suspended. (6.6) pic.twitter.com/2Z1vbSZ4nB
— ANI UP (@ANINewsUP) June 6, 2019
ಮೇ 31ರಂದು ಮಗುವಿನ ಪೋಷಕರು ಮಗುವಿನ ನಾಪತ್ತೆ ಕುರಿತು ದೂರು ದಾಖಲಿಸಿದ್ದರು. ಆದರೆ ಐದು ದಿನಗಳ ನಂತರ ಮಗುವಿನ ಮೃತದೇಹ ಮನೆಯ ಸಮೀಪದ ಕಸದ ತೊಟ್ಟಿಯಲ್ಲಿ ಅತ್ಯಂತ ಹೀನ ಸ್ಥಿತಿಯಲ್ಲಿ ಪತ್ತೆಯಾಗಿತ್ತು.
ಮಗುವಿನ ಬರ್ಬರ ಹತ್ಯೆ ಕುರಿತು ಪೊಲೀಸರು ಯಾವುದೇ ಕ್ರಮ ಕೈಗೊಳ್ಳದೇ ಇರುವುದುನ್ನು ಖಂಡಿಸಿ ಮಗುವಿನ ಕುಟುಂಬಸ್ಥರು ಪ್ರತಿಭಟನೆ ನಡೆಸಿದ್ದರು. ಅಂತಿಮವಾಗಿ ಪೋಷಕರೇ ಆರೋಪಿಗಳನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ವ್ಯಾಪಕ ಖಂಡನೆ:
ಈ ಹೇಯ ಕೃತ್ಯಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ.
ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.
“ಉತ್ತರ ಪ್ರದೇಶದ ಅಲೀಗಢದಲ್ಲಿ ಮಗುವನ್ನು ಭೀಕರವಾಗಿ ಕೊಲೆ ಮಾಡಲಾಗಿದೆ. ಈ ಘಟನೆಯಿಂದ ನನಗೆ ಸಾಕಷ್ಟು ಅಚ್ಚರಿಯಾಗಿದ್ದು, ನನ್ನನ್ನು ವಿಚಲಿತಗೊಳಿಸಿದೆ. ಯಾವುದೇ ಮನುಷ್ಯನಾಗಲಿ ಅದು ಹೇಗೆ ಒಂದು ಮಗುವನ್ನು ಈ ರೀತಿ ಕೊಲ್ಲಲು ಸಾಧ್ಯ? ಇಂಥ ನೀಚ ಕೃತ್ಯವೆಸಗಿದ ಆರೋಪಿ ಶಿಕ್ಷೆಯಿಂದ ತಪ್ಪಿಸಿಕೊಳ್ಳಬಾರದು. ಉತ್ತರ ಪ್ರದೇಶ ಪೊಲೀಸರು ಕೂಡಲೇ ಕ್ರಮಕ್ಕೆ ಮುಂದಾಗಬೇಕು,’’ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.
The horrific murder of a little girl in Aligarh, UP has shocked and disturbed me. How can any human being treat a child with such brutality? This terrible crime must not go unpunished. The UP police must act swiftly to bring the killers to justice.
— Rahul Gandhi (@RahulGandhi) June 7, 2019
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ಸಹ ಕೃತ್ಯವನ್ನು ಖಂಡಿಸಿ ಟ್ವೀಟ್ ಮಾಡಿದ್ದಾರೆ.
The brutal murder in Aligarh is yet another inhuman, unspeakable crime against an innocent child. I cannot even begin to imagine the pain her parents must feel. What has become of us?
— Priyanka Gandhi Vadra (@priyankagandhi) June 7, 2019
ಅಲ್ಲದೇ ಬಾಲಿವುಡ್ ತಾರೆಯರಾದ ನಟ ಅಕ್ಷಯ್ ಕುಮಾರ್, ನಟಿಯರಾದ ಟ್ವಿಂಕಲ್ ಖನ್ನಾ, ಸನ್ನಿ ಲಿಯೋನ್, ಸೋನಂ ಕೆ ಅಹುಜಾ, ರ್ಯಾಪರ್ ಬಾದ್ ಶಾ ಮತ್ತು ಪೋಷಕ ನಟ ಅನುಪಮ್ ಖೇರ್ ತೀವ್ರ ಖಂಡನೆ ವ್ಯಕ್ತ ಪಡಿಸಿದ್ದಾರೆ.
It is heartbreaking to hear about the horrific murder of the two and a half year old little girl In Aligarh. I would request @smritiirani to ensure that swift action is taken against the perpetrators of this heinous crime. #JusticeForTwinkle
— Twinkle Khanna (@mrsfunnybones) June 6, 2019
Im sorry Twinkle that you had to you live in a world where Humans no longer understand Humanity!!!! May God look over you for Eternity as you are an Angel !!!! #ImSorry
— Sunny Leone (@SunnyLeone) June 6, 2019
What has happened to baby twinkle is. Heartbreaking and horrific. I pray for her and her family. I also urge people to not make this into a selfish agenda. This is a little girls death, not a reason to spread your hate.
— Sonam K Ahuja (@sonamakapoor) June 7, 2019
Angry, horrified, ashamed and deeply saddened beyond words at the barbaric rape of the three year old #TwinkleSharma. The rapist should be hanged in public. No other punishment is enough for this heinous crime. I demand #JusticeForTwinkleSharma . pic.twitter.com/7EwCTQxsUh
— Anupam Kher (@AnupamPKher) June 6, 2019
What has happened to the world?! Extremely shocked #JusticeForTwinkle 🙏🙏🙏🙏🙏
— BADSHAH (@Its_Badshah) June 7, 2019
ದೇಶಾದ್ಯಂತ ಸಾಮಾಜಿಕ ಮಾಧ್ಯಮಗಳಲ್ಲೂ ಸಾರ್ವಜನಿಕರು ಘಟನೆ ಖಂಡಿಸಿ ಆಕ್ರೋಶ ಹೊರಹಾಕಿದ್ದಾರೆ.
ಪ್ರಕರಣದ ತನಿಖೆಗಾಗಿ ಉತ್ತರ ಪ್ರದೇಶ ಸರ್ಕಾರ ವಿಶೇಷ ತನಿಖಾ ತಂಡ ರಚಿಸಿದೆ.