ಬೆಂಗಳೂರು: ಸದಾ ಒಂದಿಲ್ಲೊಂದು ವಿವಾದಾತ್ಮಕ ಸುದ್ದಿ ಅಥವಾ ಹೇಳಿಗಳ ಮೂಲಕ ಸದಾ ಸುದ್ದಿಯಲ್ಲಿರಲು ಬಯಸುವ ಪತ್ರಕರ್ತ ವಿಶ್ವೇಶ್ವರ ಭಟ್ ತಮ್ಮ ಟ್ವೀಟ್ ಒಂದರಲ್ಲಿ ರಾಜ್ಯ ಸರ್ಕಾರವನ್ನು, ಸರ್ಕಾರದ ನೌಕರರನ್ನು ನಿಂದಿಸಿರುವ ಹಲವರ ನಡವಳಿಕೆ ಟೀಕೆಗೆ ಒಳಗಾಗಿದೆ.
“ಸರ್ಕಾರದ ಕೆಲಸ ನಾಯಿಯ ಕೆಲಸ,’’ ಎನ್ನುವ ಮೂಲಕ ಪತ್ರಕರ್ತ ವಿಶ್ವೇಶ್ವರ ಭಟ್ ರಾಜ್ಯ ಸರ್ಕಾರಕ್ಕೆ ಹಾಗೂ ರಾಜ್ಯದ ಸರ್ಕಾರಿ ನೌಕರರಿಗೆ ಅವಮಾನಿಸಿದ್ದಾರೆ.
ಇತ್ತೀಚೆಗಷ್ಟೇ ರಾಜ್ಯ ಸರ್ಕಾರ ಸಹ ಕೇಂದ್ರ ಸರ್ಕಾರದಂತೆ ರಾಜ್ಯ ಸರ್ಕಾರಿ ನೌಕರರಿಗೆ ಎರಡನೇ ಹಾಗೂ ನಾಲ್ಕನೇ ಶನಿವಾರಗಳಂದು ಸರ್ಕಾರಿ ರಜೆ ಘೋಷಿಸಿ ಸುತ್ತೋಲೆ ಹೊರಡಿಸಿತ್ತು.
ಈ ಕುರಿತು ಟ್ವೀಟ್ ಮಾಡಿರುವ ಪತ್ರಕರ್ತ ವಿಶ್ವೇಶ್ವರ ಭಟ್, “ಕರ್ನಾಟಕ ರಾಜ್ಯ ಸರ್ಕಾರಿ ನೌಕರರಿಗೆ ಮತ್ತಷ್ಟು ದಿನಗಳ ರಜೆ ಸಿಗಲಿದೆ. ಇದೀಗ ಎರಡನೇ ಹಾಗೂ ನಾಲ್ಕನೇ ಶನಿವಾರಗಳಂದು ಸರ್ಕಾರಿ ರಜೆ ಮತ್ತು ಆ ದಿನಗಳಂದು ಸರ್ಕಾರಿ ಕಚೇರಿಗಳು ಬಂದ್ ಆಗಿರಲಿದೆ. ವಾರಾಂತ್ಯಗಳಲ್ಲಿ ಕರ್ನಾಟಕ ತಟಸ್ಥವಾಗಿರಲಿದೆ. ಸರ್ಕಾರಿ ಕೆಲಸ ನಾಯಿಯ ಕೆಲಸ’’ ಎಂದು ವಿವಾದಾತ್ಮಕವಾಗಿ ಟ್ವೀಟ್ ಮಾಡಿದ್ದಾರೆ.
Karnataka State Govt employees get some more holidays. Now second and fourth Saturdays will be holidays and Govt offices will remain closed. Karnataka will be standstill during weekends.
Govt work is Dog’s work !
— Vishweshwar Bhat (@VishweshwarBhat) June 6, 2019
ವಿಶ್ವೇಶ್ವರ ಭಟ್ಟರ ಟ್ವೀಟ್ ಗೆ ಹಲವರು ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ.
“ಭಾಷೆ ಹಿಡಿತದಲ್ಲಿರಲಿ, ಹಲವು ಸರ್ಕಾರಿ ನೌಕರರು ಬಹಳ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದಾರೆ. ಇಡೀ ನೌಕರರ ಸಮುದಾಯವನ್ನೇ ಅಗೌರವಿಸಬೇಡಿ,’’ ಎಂದು ಒಬ್ಬರು ಟೀಕಿಸಿದ್ದಾರೆ.
language sir! There are so many honest Govt employees, don’t disrespect the entire fraternity.
— Siddalingeshwar V Patil🇮🇳 (@SiddPatil) June 6, 2019
ಮತ್ತೊಬ್ಬರು, “ಭಟ್ಟರೇ, ಮೊದಲು ನಿಮ್ಮ ಪತ್ರಿಕಾ ಧರ್ಮ ಪಾಲಿಸಿ, ಆಮೇಲೆ ಇನ್ನಿತರ ವಿಷಯಗಳ ಬಗ್ಗೆ ಕಮೆಂಟ್ ಮಾಡಿ,’ ಎಂದೂ ವ್ಯಂಗ್ಯವಾಡಿದ್ದಾರೆ.
https://twitter.com/NBR36568434/status/1136668520282910722
ಅಮರೇಶ್ ನಾಯಕ್ ಎನ್ನುವವರು ಪ್ರತಿಕ್ರಿಯಿಸಿ, 4ನೇ ಶನಿವಾರದ ರಜಾದಿನದ ಶಿಫಾರಸನ್ನು ಸಮಿತಿಗಳು ಮಾಡಿರುವುದರಿಂದ ಅದನ್ನು ಜಾರಿಗೊಳಿಸಲಾಗಿದೆ. ಹಾಗೆಯೇ ಕನಕ ಜಯಂತಿ, ವಾಲ್ಮೀಕಿ ಜಯಂತಿಗಳಿಗೆ ರಜೆ ನೀಡುತ್ತಿದ್ದುದನ್ನು ನಿಲ್ಲಿಸಲಾಗಿದೆ. ಈ ದಿನಗಳಲ್ಲಿ ಶಾಲೆಗಳು ನಡೆಯುತ್ತವೆ. ಮೀಡಿಯಾ ಕೆಲಸ ಈಗ ಕತ್ತೆಗಳ ಕೆಲಸವಾಗಿದೆ” ಎಂದು ವಿಶ್ವೇಶ್ವರ ಭಟ್ ಗೆ ಅವರದೇ ದಾಟಿಯಲ್ಲಿ ಉತ್ತರಿಸಿದ್ದಾರೆ.
The idea of a holiday on 4th Saturday was recommended by the committee,so it was implemented.
Also the holidays on various occasion viz, kanakadas, Valmiki jayanti etc are now stopped.
Schools will runs on these days.Media work has become donkey's work !!
Mr.@VishweshwarBhat— Amaresh Naik🛡️ (@aspiring_civils) June 7, 2019
ಬಾನು ಎಂಬುವವರು, “ಇಲ್ಲ, ನಾನು ಕರ್ನಾಟಕ ಸರ್ಕಾರದಲ್ಲಿ ಕನ್ಸಲ್ಟೆಂಟ್ ಆಗಿ ಕೆಲಸ ಮಾಡುತ್ತಿದ್ದೇನೆ. ಸರ್ಕಾರದ ಎಲ್ಲಾ ಸೇವೆಗಳನ್ನು ಮೊಬೈಲ್ ಮೂಲಕ ಪಡೆಯುವಂತಾಗಲು ಹಗಲೂ ರಾತ್ರಿ ಕೆಲಸ ಮಾಡುತ್ತಿದ್ದೇನೆ. ನಾವು ನಾಯಿಯ ಕೆಲಸ ಮಾಡುತ್ತಿದ್ದೇವೆ ಎಂದು ಎಂದೂ ಯೋಚಿಸಲಿಲ್ಲ. ನಿಮ್ಮ ಮಾತುಗಳನ್ನು ಹಿಂತೆಗೆದುಕೊಳ್ಳಿ. ಒಬ್ಬ ಹಿರಿಯ ಪತ್ರಕರ್ತರಾದ ನಿಮಗೆ ಇಂತಹ ಮಾತುಗಳು ಶೋಭಿಸುವುದಿಲ್ಲ” ಎಂದು ಬುದ್ದಿ ಹೇಳಿದ್ದಾರೆ.
No. I m a consultant at government of Karnataka. Working day and night to bring everything services to Mobile platform. We never imagined we are doing dog's work. Please take your words back. This kind of words not suitable for senior journalists like you.
— Bhanu (@BhanuTasp) June 6, 2019