ಬೆಂಗಳೂರು, ಜೂನ್ 10- ಇಂದು ನಿಧನರಾದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಶ್ರೀ ಗಿರೀಶ್ ಕಾರ್ನಾಡ್ ಅವರ ಗೌರವಾರ್ಥ ಸರ್ಕಾರಿ ಕಚೇರಿಗಳು, ಶಾಲೆ, ಕಾಲೇಜುಗಳಿಗೆ ಇಂದು ಒಂದು ದಿನ ರಜೆ ಘೋಷಿಸಲಾಗುವುದು. ಹಾಗೂ ಮೂರು ದಿನಗಳ ಕಾಲ ರಾಜ್ಯಾದ್ಯಂತ ಶೋಕಾಚರಣೆ ಘೋಷಿಸಲಾಗುವುದು ಹಾಗೂ ಸಕಲ ಸರ್ಕಾರಿ ಗೌರವಗಳೊಂದಿಗೆ ಮೃತರ ಅಂತ್ಯಕ್ರಿಯೆ ನೆರವೇರಿಸಲಾಗುವುದು ಎಂದು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ತಿಳಿಸಿದ್ದಾರೆ.
ಈ ಹಿಂದೆ ನಿಧನರಾದ ಇತರ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿಗಳ ಗೌರವಾರ್ಥ ಸರ್ಕಾರ ಕೈಗೊಂಡಿರುವ ಕ್ರಮಗಳನ್ನು ಕಾರ್ನಾಡ್ ಅವರ ಗೌರವಾರ್ಥವಾಗಿ ಕೈಗೊಳ್ಳಲಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಈ ನಡುವೆ ಗಿರೀಶ್ ಕಾರ್ನಾಡ್ ಅವರ ಅಂತಿಮ ಸಂಸ್ಕಾರ ಕಾರ್ನಾಡ್ ಅವರು ಇಚ್ಛಿಸಿದ್ದಂತೆ ಯಾವುದೇ ವಿಧಿ ವಿಧಾನಗಳಿಲ್ಲದೆ 4.30 ಗಂಟೆಗೆ ಬೈಯಪ್ಪನಹಳ್ಳಿ, ಕಲ್ಪಲ್ಲಿ ವಿದ್ಯುತ್ ಚಿತಾಗಾರದಲ್ಲಿ ನಡೆಯಲಿದೆ, ಅವರ ಪಾರ್ಥಿವ ಶರೀರ ದರ್ಶನಕ್ಕೆ ಯಾವುದೇ ವಿಶೇಷ ವ್ಯವಸ್ಥೆಗಳಿಲ್ಲ, ಅಂತಿಮ ಗೌರವ ಸಲ್ಲಿಸುವವರು ಅಲ್ಲಿಗೇ 2.30- 3 ರ ಹೊತ್ತಿಗೆ ಬಂದು ಸಲ್ಲಿಸಬಹುದು ಎಂದು ಗಿರೀಶ್ ಕಾರ್ನಾಡ್ ಕುಟುಂಬಸ್ಥರು ಮನವಿ ಮಾಡಿಕೊಂಡಿದ್ದಾರೆ
ಗಣ್ಯರ ಸಂತಾಪ
ಲೋಕಪ್ರಸಿದ್ಧ ಸಾಹಿತಿ, ರಂಗತಜ್ಞ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಗಿರೀಶ್ ಕಾರ್ನಾಡ್ ಅವರ ನಿಧನಕ್ಕೆ ಇಡೀ ಕನ್ನಡ ನಾಡು ಸಂತಾಪ ವ್ಯಕ್ತಪಡಿಸಿದೆ. ನಾಡಿನೊಳಗೂ, ನಾಡಿನಾಚೆಗೂ ಅನೇಕಾನೇಕ ಸಾಹಿತಿಗಳು, ರಾಜಕಾರಣಿಗಳು, ಲೇಖಕರು, ರಂಗಕರ್ಮಿಗಳು, ಚಲನಚಿತ್ರ ಲೋಕ, ಹೀಗೆ ಕಾರ್ನಾಡ್ ಅವರನ್ನು ಕಂಡು, ತಿಳಿದ ಎಲ್ಲರೂ ತಮ್ಮ ದುಃಖ ವ್ಯಕ್ತಪಡಿಸುತ್ತಿದ್ದಾರೆ
ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ತಮ್ಮ ಸಂತಾಪವನ್ನು ವ್ಯಕ್ತಪಡಿಸಿ “ಇಂದು ನಮ್ಮ ಸಾಂಸ್ಕೃತಿಕ ಲೋಕ ಬಡವಾದಂತಾಗಿದೆ. ಗಿರೀಶ್ ಕಾರ್ನಾಡ್ ಅವರ ಕುಟುಂಬವರ್ಗ ಮತ್ತು ಕಾರ್ನಾಡದ ಕೆಲಸಗಳ ಮೂಲಕ ಅವರನ್ನು ಅನುಸರಿಸಿರುವ ಎಲ್ಲರಿಗೆ ನನ್ನ ತೀವ್ರ ಸಂತಾಪಗಳು” ಎಂದು ಟ್ವೀಟ್ ಮಾಡಿದ್ದಾರೆ.
Sad to hear of the passing of Girish Karnad, writer, actor and doyen of Indian theatre. Our cultural world is poorer today. My condolences to his family and to the many who followed his work #PresidentKovind
— President of India (@rashtrapatibhvn) June 10, 2019
ಗಿರೀಶ್ ಕಾರ್ನಾಡ್ ನಿಧನಕ್ಕೆ ಸಂತಾಪ ಸಲ್ಲಿಸಿರುವ ಪ್ರಧಾನಿ ನರೇಂದ್ರ ಮೋದಿ, “ಅವರು ತಮ್ಮ ನಟನೆಗಾಗಿ ಎಂದಿಗೂ ನೆನಪಿನಲ್ಲಿ ಉಳಿಯುತ್ತಾರೆ, ಅವರು ತಮಗೆ ಪ್ರಿಯವಾಗಿದ್ದ ವಿಚಾರಗಳಗಾಗಿ ಭಾವತೀವ್ರತೆಯಿಂದ ಸ್ಪಂದಿಸುತ್ತಿದ್ದರು” ಎಂದು ಮೋದಿ ಟ್ವೀಟ್ ಮೂಲಕ ತಿಳಿಸಿದ್ದಾರೆ.
Girish Karnad will be remembered for his versatile acting across all mediums. He also spoke passionately on causes dear to him. His works will continue being popular in the years to come. Saddened by his demise. May his soul rest in peace.
— Narendra Modi (@narendramodi) June 10, 2019
ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಟ್ವೀಟ್ ಮಾಡಿ, “ಜ್ಞಾನಪೀಠ ಪುರಸ್ಕೃತ ಲೇಖಕ, ಪ್ರಸಿದ್ಧ ನಟ/ನಿರ್ದೇಶಕ ಶ್ರೀ ಗಿರೀಶ್ ಕಾರ್ನಾಡ್ ಅವರ ನಿಧನದ ಸುದ್ದಿಯಿಂದ ತೀವ್ರ ದುಃಖವಾಗಿದೆ. ಕಾರ್ನಾಡ್ ಅವರು ಸಾಹಿತ್ಯ, ಸಿನಿಮಾ ಮತ್ತು ರಂಗಭೂಮಿಗಳಿಗೆ ಸಲ್ಲಿಸಿದ ಕೊಡುವೆ ಎಂದಿಗೂ ನೆನಪಿನಲ್ಲಿ ಉಳಿಯುತ್ತದೆ, ಅವರ ನಿಧನದಲ್ಲಿ ನಾವೊಬ್ಬ ಸಾಂಸ್ಕೃತಿಕ ರಾಯಭಾರಿಯನ್ನು ಕಳೆದುಕೊಂಡಿದ್ದೇವೆ” ಎಂದು ತಿಳಿಸಿದ್ದಾರೆ
Deeply saddened to hear of the demise of Jnanpith laureate writer and iconic actor/film maker, Sri #GirishKarnad .
His outstanding contribution to literature, theatre and films will always be remembered.
In his death, we lost a cultural ambassador. May his soul rest in peace. pic.twitter.com/s5bfbh0VgE
— H D Kumaraswamy (@hd_kumaraswamy) June 10, 2019
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, “ಹಿರಿಯ ಸಾಹಿತಿ,ಚಿಂತಕ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಗಿರೀಶ್ ಕಾರ್ನಾಡ್ ಅವರ ನಿಧನದಿಂದ ನಾಡಿನ ಬಹುಮುಖ್ಯ ಸಾಕ್ಷಿಪ್ರಜ್ಞೆಯ ದನಿ ಮೌನವಾದಂತಾಗಿದೆ. ಈ ದುರಿತದ ಕಾಲದಲ್ಲಿ ಅವರು ನಮ್ಮೊಡನೆ ಇನ್ನಷ್ಟು ಕಾಲ ಇರಬೇಕಿತ್ತು. ಅವರ ಸಾವಿನ ಶೋಕದಲ್ಲಿ ನಾನು ಭಾಗಿಯಾಗಿದ್ದೇನೆ” ಎಂದು ತಿಳಿಸಿದ್ದಾರೆ.
ಹಿರಿಯ ಸಾಹಿತಿ,ಚಿಂತಕ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಗಿರೀಶ್ ಕಾರ್ನಾಡ್ ಅವರ ನಿಧನದಿಂದ ನಾಡಿನ ಬಹುಮುಖ್ಯ ಸಾಕ್ಷಿಪ್ರಜ್ಞೆಯ ದನಿ ಮೌನವಾದಂತಾಗಿದೆ. ಈ ದುರಿತದ ಕಾಲದಲ್ಲಿ ಅವರು ನಮ್ಮೊಡನೆ ಇನ್ನಷ್ಟು ಕಾಲ ಇರಬೇಕಿತ್ತು. ಅವರ ಸಾವಿನ ಶೋಕದಲ್ಲಿ ನಾನು ಭಾಗಿಯಾಗಿದ್ದೇನೆ.#GirishKarnad pic.twitter.com/VWTWZO12xa
— Siddaramaiah (@siddaramaiah) June 10, 2019
ಮಾಜಿ ಮುಖ್ಯಮಂತ್ರಿ ಹಾಗೂ ಪ್ರತಿಪಕ್ಷ ನಾಯಕ ಬಿ ಎಸ್ ಯಡಿಯೂರಪ್ಪ ಅವರು, “ಹಿರಿಯ ನಟ, ನಾಟಕಕಾರ ಮತ್ತು ಜ್ಞಾನಪೀಠ ಪುರಸ್ಕೃತ ಶ್ರೀ ಗಿರೀಶ್ ಕಾರ್ನಾಡ್ ಅವರ ನಿಧನ ಸುದ್ದಿ ಕೇಳಿ ತೀವ್ರ ದುಃಖಗೊಂಡಿದ್ದೇನೆ. ಗಿರೀಶ್ ಕಾರ್ನಾಡ್ ಮತ್ತು ಅವರ ಕುಟುಂಬಗಕ್ಕೆ ನನ್ನ ತೀವ್ರ ಸಂತಾಪಗಳು” ಎಂದು ಟ್ವೀಟ್ ಮಾಡಿದ್ದಾರೆ.
Saddened to hear the demise of veteran actor-playwright and jnanapeeta awardee Sri. Girish Karnad. My deepest condolences to @RKarnad and his family. pic.twitter.com/Sr53rnPSso
— B.S. Yeddyurappa (@BSYBJP) June 10, 2019
ಬಹುಭಾಷಾ ನಟ, ರಾಜಕಾರಣಿ ಪ್ರಕಾಶ್ ರಾಜ್ ಅವರು, “ಕನ್ನಡವನ್ನು….ಕನ್ನಡಿಗರನ್ನು…ಕರ್ನಾಟಕವನ್ನು.. ಶ್ರೀಮಂತಗೊಳಿಸುತ್ತಾ ಬಾಳಿ ಬದುಕಿದ ಅದಮ್ಯ ಚೇತನ ಕಾರ್ನಾಡರಿಗೆ ನಮನ” ಎಂದು ಟ್ವೀಟ್ ಮಾಡಿದ್ದಾರೆ.
ಕನ್ನಡವನ್ನು….ಕನ್ನಡಿಗರನ್ನು…ಕರ್ನಾಟಕವನ್ನು.. ಶ್ರೀಮಂತಗೊಳಿಸುತ್ತಾ ಬಾಳಿ ಬದುಕಿದ ಅದಮ್ಯ ಚೇತನ ಕಾರ್ನಾಡರಿಗೆ ನಮನ THANK YOU GIRISH KARNAD JI for an ENRICHING..EMPOWERING..INSPIRING LIFE YOU LED ..RIP .. Every moment I lived with you is ALIVE . Will miss you ..but will cherish you for life .. pic.twitter.com/KgFyL2Ehu5
— Prakash Raj (@prakashraaj) June 10, 2019
ದೆಹಲಿ ಮುಖ್ಯಮಂತ್ರಿ ಹಾಗೂ ಆಮ್ ಆದ್ಮಿ ಪಕ್ಷದ ಮುಖಂಡ ಅರವಿಂದ ಕೇಜ್ರಿವಾಲ್ ತಮ್ಮ ಸಂತಾಪ ತಿಳಿಸಿದ್ದಾರೆ.
Sad news coming in the morning about the passing away of veteran noted actor and playwright Girish Karnad. Girish ji's views and artistic contribution will be missed by the country.
— Arvind Kejriwal (@ArvindKejriwal) June 10, 2019
ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ತಮ್ಮ ಸಂತಾಪ ತಿಳಿಸಿದ್ದಾರೆ.
ಇದನ್ನೂ ಓದಿ:
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ ಗಿರೀಶ್ ಕಾರ್ನಾಡ್ ನಿಧನ