ನವದೆಹಲಿ: ಉತ್ತರ ಪ್ರದೇಶ ರಾಜ್ಯ ಸರ್ಕಾರ ಬಂಧಿಸಿದ್ದ ಪ್ರತ್ರಕರ್ತ ಪ್ರಶಾಂತ್ ಕನೋಜಿಯಾ ಅವರನ್ನು ಕೂಡಲೇ ಬಿಡುಗಡೆ ಮಾಡುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿದೆ.
ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಅದಿತ್ಯನಾಥ್ ವಿರುದ್ಧ ‘ಆಕ್ಷೇಪಾರ್ಹ’ ಪೋಸ್ಟ್ ಒಂದನ್ನು ಫೇಸ್ ಬುಕ್ ನಲ್ಲಿ ಹಂಚಿಕೊಂಡಿದ್ದ ಆರೋಪದ ಹಿನ್ನೆಲೆಯಲ್ಲಿ ಯೋಗಿ ಸರ್ಕಾರ ಪತ್ರಕರ್ತ ಪ್ರಶಾಂತ್ ಕನೋಜಿಯಾ ಅವರನ್ನು ಬಂಧಿಸಿ ಜೈಲಿಗೆ ತಳ್ಳಿತ್ತು. ಕನೋಜಿಯಾ ಪತ್ನಿ ಕೋರ್ಟ್ ಮೆಟ್ಟಿಲೇರಿ ಪತ್ರಕರ್ತ ಪ್ರಶಾಂತ್ ಅವರನ್ನು ಬಿಡುಗಡೆ ಮಾಡುವಂತೆ ಮನವಿ ಮಾಡಿಕೊಂಡಿದ್ದರು. ಪ್ರಕರಣವನ್ನು ವಿಚಾರಣೆಗೆ ಸೋಮವಾರ ಕೈಗೆತ್ತಿಕೊಂಡಿದ್ದ ನ್ಯಾಯಮೂರ್ತಿ ಇಂದಿರಾ ಬ್ಯಾನರ್ಜಿ ಮತ್ತು ಅಜಯ್ ರಷ್ಟೋಗಿ ಒಳಗೊಂಡ ರಜಾವಧಿಯ ನ್ಯಾಯಪೀಠ ಜಾಮೀನಿನ ಮೇಲೆ ಪ್ರಶಾಂತ್ ಕನೋಜಿಯಾ ಅವರನ್ನು ಬಿಡುಗಡೆ ಮಾಡುವಂತೆ ಇಂದು ಆದೇಶಿಸಿದೆ.
ಕೋರ್ಟ್ ಟ್ವೀಟುಗಳನ್ನು ಗಳನ್ನು ಶ್ಲಾಘಿಸುವುದಿಲ್ಲ, ಅಂತೆಯೇ ಪ್ರಶಾಂತ್ ಅವರನ್ನು 22ರವರೆಗೆ ನ್ಯಾಯಾಂಗ ಬಂಧನದಲ್ಲಿಡುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟಿದೆ.
“ಜನರು ಸಾಮಾಜಿಕ ಮಾಧ್ಯಮದಲ್ಲಿ ಎಲ್ಲವನ್ನೂ ನಂಬುತ್ತಾರೆ ಎಂದ ಮಾತ್ರಕ್ಕೆ ಅದನ್ನೇ ದುರುಪಯೋಗಪಡಿಸಿಕೊಳ್ಳುವುದು ಸರಿಯಲ್ಲ ಮತ್ತು ಈ ಪೋಸ್ಟ್ ಜನರನ್ನು ತಪ್ಪುದಾರಿಗೆ ಎಳೆಯುತ್ತಿದೆ ಎಂಬುದನ್ನು ನಂಬಲು ಯಾವುದೇ ಆಧಾರವಿಲ್ಲ,” ಎಂದು ಇಂದಿರಾ ತಿಳಿಸಿದ್ದಾರೆ.
ಇಂತಹ ಟ್ವೀಟ್ಸ್ ಗಳನ್ನು ನಾವು ಶ್ಲಾಘಿಸುವುದಿಲ್ಲ, ಆದರೆ ಇದಕ್ಕಾಗಿ ಅವರನ್ನು ಬಂಧಿಸುವುದು ಸರಿಯೇ? ಪತ್ರಕರ್ತ ಪ್ರಶಾಂತ್ ಅವರ ಬಿಡುಗಡೆಯು ಟ್ವೀಟ್ ಗೆ ಸಮರ್ಥನೆಯಲ್ಲ, ಆದರೆ ಟ್ವೀಟ್ ಗಾಗಿ ಪತ್ರಕರ್ತರನ್ನು ಬಂಧಿಸುವುದಕ್ಕೆ ನಮ್ಮ ಅಸಮ್ಮತಿ ಇದೆ ಎಂಬುದಷ್ಟೇ ಇದರ ಅರ್ಥ,” ಎಂದು ಅಪೆಕ್ಸ್ ಕೋರ್ಟ್ ಹೇಳಿದೆ.
ಯಾವುದೇ ವಾರಂಟ್ ಇಲ್ಲದೆ ಪ್ರಶಾಂತ್ ನನ್ನು ಬಂಧಿಸಲಾಗಿದೆ. ಆದರೆ ಉತ್ತರ ಪ್ರದೇಶ ಸರ್ಕಾರದ ಪರ ವಕೀಲ 505 ಸೆಕ್ಷನ್ ಅಡಿಯಲ್ಲಿ ಪ್ರಶಾಂತ್ ನನ್ನು ಬಂಧಿಸಲಾಗಿದೆ ಎಂದಿದ್ದರು. ಆದರೆ ರೋಷ್ಟಗಿ ಈ ಪ್ರಕರಣದಲ್ಲಿ ಈ ಸೆಕ್ಷನ್ ಯಾವ ರೀತಿ ಅಳವಡಿಸಲಾಗಿದೆ ಎಂದು ಕೋರ್ಟ್ ಸಂಶಯ ವ್ಯಕ್ತಪಡಿಸಿದೆ.
ಮುಖ್ಯಮಂತ್ರಿ ಯೋಗಿ ಅದಿತ್ಯನಾಥ್ ವಿರುದ್ಧದ ಆಕ್ಷೇಪಾರ್ಹ ಮಾಹಿತಿಯುಳ್ಳ ಪೋಸ್ಟ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಹಿನ್ನೆಲೆಯಲ್ಲಿ ಪ್ರಶಾಂತ್ ಸೇರಿದಂತೆ ಐವರನ್ನು ಬಂಧಿಸಲಾಗಿತ್ತು. ಇದನ್ನು ಖಂಡಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ಟೀಕೆ, ಪ್ರತಿರೋಧ ವ್ಯಕ್ತವಾಗಿತ್ತು.