ಅಲೀಗಢ: ತಾಂತ್ರಿಕ ಪದ್ಧತಿಯಂತೆ ಮಾಂತ್ರಿಕನೊಂದಿಗೆ ಲೈಂಗಿಕ ಸಂಭೋಗ ನಡೆಸಲು ಒಪ್ಪದ ತನ್ನ ಹೆಂಡತಿಯನ್ನೇ ನದಿಯಲ್ಲಿ ಮುಳುಗಿಸಿ ಗಂಡನೇ ಕೊಂದ ಘಟನೆ ನಡೆದಿದೆ.
ತಂದೆ ಮಣಿಪಾಲ್ 32ವರ್ಷದ ಪತ್ನಿಯನ್ನು ಕೊಲ್ಲುತ್ತಿದ್ದಾಗ ತನ್ನ ತಾಯಿಯನ್ನು ಕಾಪಾಡುವಂತೆ ಸ್ವತಃ ಮಗನೇ ಚೀರಿಕೊಂಡಿದ್ದಾನೆ. ಘಟನೆಗೆ ಮಗನೇ ಪ್ರತ್ಯಕ್ಷದರ್ಶಿ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯು ಗುರುವಾರ ನಡೆದಿದ್ದು, ಮಹಿಳೆಯನ್ನು ಕೊಂದ ಮಣಿಪಾಲ್ ಹಾಗೂ ಮಾಂತ್ರಿಕ ಸಂತದಾಸ್ ದುರ್ಗ ದಾಸ್ ನನ್ನು ಶುಕ್ರವಾರ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ತನ್ನ ತಾಯಿಯನ್ನು ರಕ್ಷಿಸಲು ಮುಂದಾದರೆ ತನಗೂ ಇದೇ ಪರಿಸ್ಥಿತಿ ಬಂದೊದಗುತ್ತದೆ ಎಂದು ತಂದೆ ಮಣಿಪಾಲ್ ಮಗನಿಗೆ ಎಚ್ಚರಿಕೆ ನೀಡಿದ್ದ ಎಂದು ಸಂತ್ರಸ್ತ ಮಹಿಳೆಯ ಸಹೋದರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಮಹಿಳೆಯ ಸಹೋದರ ರಾಜೇಶ್ ಕುಮಾರ್ ದಡೋನ್ ಪೊಲೀಸ್ ಠಾಣೆಯಲ್ಲಿ ಆರೋಪಿ ವಿರುದ್ಧ ದೂರು ದಾಖಲಿಸಿದ್ದಾರೆ. “ಸಾಕಷ್ಟು ಆತಂಕಗೊಂಡಿದ್ದ ತನ್ನ ಸಹೋದರಿ ಎರಡು ದಿನಗಳ ಹಿಂದೆ ತನಗೆ ಕರೆ ಮಾಡಿ ಸಮಸ್ಯೆ ತೋಡಿಕೊಂಡಿದ್ದಳು ಹಾಗೂ ಮಧ್ಯಪ್ರವೇಶಿಸಿ ಸಮಸ್ಯೆ ಬಗೆಹರಿಸುವಂತೆ ಕೋರಿದ್ದರು,” ಎಂದು ದೂರಿನಲ್ಲಿ ತಿಳಿಸಿದ್ದಾರೆ ಎಂಬುದಾಗಿ ಎಸ್ಎಸ್ಪಿ ಆಕಾಶ್ ಕುಲ್ಹಾರಿ ತಿಳಿಸಿದ್ದಾರೆ.
ಆರಂಭದಲ್ಲಿ ಸಮಸ್ಯೆ ಯಾವುದೇ ಸಮಸ್ಯೆ ಇಲ್ಲದೆ ಸುಖಮಯವಾಗಿ ಬಗೆಹರಿಯುತ್ತದೆ ಎಂದುಕೊಂಡಿದ್ದೆವು, ಆದರೆ ಮಣಿಪಾಲ್ ಪತ್ನಿಯನ್ನು ಸಮೀಪದ ನದಿಯ ಬಳಿ ಕರೆದೊಯ್ದು ಕೊಲ್ಲುವ ಮೂಲಕ ಅಂತ್ಯವಾಗಿದೆ ಎಂದು ರಾಜೇಶ್ ಪೊಲೀಸರಿಗೆ ವಿವರಿಸಿದ್ದಾರೆ.
ಪತ್ನಿಯನ್ನು ಕೊಂದ ನಂತರ ಪತಿ ಹಾಗೂ ಮಾಂತ್ರಿಕ ನದಿಯಲ್ಲಿ ಈಜಿ ಮತ್ತೊಂದು ಬದಿ ಸೇರಿ ಬದೌನ್ ಜಿಲ್ಲೆಯ ಮೂಲಕ ಪಲಾಯನವಾಗಲು ಯತ್ನಿಸಿದ್ದಾರೆ.
ರಾಜೇಶ್ ದೂರು ನೀಡುತ್ತಿದ್ದಂತೆ ಪೊಲೀಸರು ಕೂಡಲೇ ಇಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ನದಿಯಿಂದ ಮಹಿಳೆಯ ದೇಹವನ್ನು ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಕುಲ್ಹಾರಿ ತಿಳಿಸಿದ್ದಾರೆ.
ಮಾಂತ್ರಿಕ ಸಂತದಾಸ್ ಹಿಂದೆಯೂ ಅಪರಾಧವೆಸಗಿದ್ದು, ಆತನಿಗೆ ಆಪರಾಧ ಹಿನ್ನೆಲೆ ಇದೆ. ಕಳೆದ ವರ್ಷ ಅವನ ಬಳಿ ಹಲವು ನಾಯಕ ನಟಿಯರು ಪತ್ತೆಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.