ಮುಜಾಫರ್ ನಗರ: ಬಿಹಾರದ ಆರೋಗ್ಯ ಸಚಿವ ಮಂಗಲ್ ಪಾಂಡೆ ರಾಜ್ಯದ ಮಕ್ಕಳಲ್ಲಿ ಕಾಡುತ್ತಿರುವ ಅಕ್ಯುಟ್ ಎನ್ಸಫಲೈಟಿಸ್ ಸಿಂಡ್ರೋಮ್ (ಎಇಎಸ್) ಕುರಿತ ಗಂಭೀರ ಸುದ್ದಿಗೋಷ್ಠಿಯಲ್ಲಿ ಪಾಕಿಸ್ತಾನ, ಭಾರತದ ನಡುವೆ ನಡೆಯುತ್ತಿದ್ದ ಕ್ರಿಕೆಟ್ ಪಂದ್ಯಾವಳಿಯ ವಿಕೆಟ್ ಎಷ್ಟು ಎಂದು ಕೇಳುವ ಮೂಲಕ ಟೀಕೆಗೆ ಒಳಗಾಗಿರುವ ಘಟನೆ ನಡೆದಿದೆ.
ಸುದ್ದಿಗೋಷ್ಠಿಯಲ್ಲಿ ಕೇಂದ್ರ ಸಚಿವ ಡಾ. ಹರ್ಷವರ್ಧನ್ ಹಾಗೂ ಆರೋಗ್ಯ ಮತ್ತು ಕುಟುಂಬ ರಾಜ್ಯ ಖಾತೆ ಸಚಿವ ಅಶ್ವಿನಿ ಕುಮಾರ್ ಸೌಬೆ ಸಹ ಇದ್ದರು.
ಪಾಂಡೆ ಅವರು ಸುದ್ದಿಗೋಷ್ಠಿ ನಡೆಸುವ ವೇಳೆಗಾಗಲೇ ಎಇಎಸ್ ನಿಂದಾಗಿ ಕನಿಷ್ಠ 90 ಮಕ್ಕಳು ಅಸುನೀಗಿದ್ದರು, ಗಂಭೀರ ಆರೋಗ್ಯ ಸಮಸ್ಯೆಯಿಂದಾಗಿ ಬಿಹಾರ ತತ್ತರಿಸಿಹೋಗಿತ್ತು.
ಆದರೆ ಸಚಿವ ಪಾಂಡೆ ಮಾತ್ರ ಸುದ್ದಿಗೋಷ್ಠಿಯ ನಡುವೆಯೇ ಅಚ್ಚರಿಯೆಂಬಂತೆ, “ಎಷ್ಟು ವಿಕೆಟ್ ಹೋಗಿದೆ?,” ಎಂದು ಕೇಳುವ ಮೂಲಕ ರಾಜ್ಯದ ಗಂಭೀರ ಸಮಸ್ಯೆ ಕುರಿತು ತಮಗಿರುವ ಅಸಡ್ಡೆ ಏನು ಎಂದು ತೋರಿದ್ದಾರೆ.
ವರ್ಧನ್ ಹಾಗೂ ಚೌಬೆ ಒಟ್ಟಾಗಿ ಕುಳಿತಿದ್ದು, ಈ ವೇಳೆ ಪಾಂಡೆ ಕೇಳಿರುವ ಪ್ರಶ್ನೆಗೆ ಸುದ್ದಿಗಾರನೊಬ್ಬ ಪ್ರತಿಕ್ರಿಯಿಸಿದ್ದು, “4 ವಿಕೆಟ್” ಎಂದಿರುವ ವಿಡಿಯೋವನ್ನು ಎಎನ್ಐ ಸುದ್ದಿ ಸಂಸ್ಥೆ ಬಿಡುಗಡೆ ಮಾಡಿದ್ದು. ಪಾಂಡೆ ಅವರ ಈ ವಿಡಿಯೋ ಇದೀಗ ವೈರಲ್ ಆಗಿದೆ.
#WATCH Bihar Health Minister Mangal Pandey asks for latest cricket score during State Health Department meeting over Muzaffarpur Acute Encephalitis Syndrome (AES) deaths. (16.6.19) pic.twitter.com/EVenx5CB6G
— ANI (@ANI) June 17, 2019