ಬೆಂಗಳೂರು- ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಸೋಲು ಕಂಡಿರುವ ಹಿನ್ನೆಲೆಯಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಹಾಗೂ ಕಾರ್ಯಾಧ್ಯಕ್ಷರನ್ನು ಹೊರತುಪಡಿಸಿ ಬ್ಲಾಕ್ ಮಟ್ಟದಿಂದ ರಾಜ್ಯಮಟ್ಟದವರೆಗೂ ಎಲ್ಲಾ ಪದಾಧಿಕಾರಿಗಳನ್ನು ಪುನಾರಚಿಸಲು ಕಾಂಗ್ರೆಸ್ ಹೈಕಮಾಂಡ್ ತೀರ್ಮಾನಿಸಿದೆ.
ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರ ಆದೇಶದ ಮೇರೆಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರು ಇಂದು ಮಧ್ಯಾಹ್ನ ಮಹತ್ವದ ಆದೇಶ ಹೊರಡಿಸಿದ್ದು, ಕೆಪಿಸಿಸಿ ಉಪಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿ, ಕಾರ್ಯದರ್ಶಿ ಸೇರಿದಂತೆ ಜಿಲ್ಲಾ ಘಟಕದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಬದಲಾವಣೆಗೂ ಕಾಂಗ್ರೆಸ್ ನಿರ್ಧರಿಸಿದೆ.

ಅಧ್ಯಕ್ಷರಾದ ದಿನೇಶ್ ಗುಂಡೂರಾವ್, ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಅವರು ಮಾತ್ರ ಹುದ್ದೆಯಲ್ಲಿ ಮುಂದುವರೆದಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಸೋಲುಂಡ ದಿನದಿಂದಲೂ ಕೆಪಿಸಿಸಿ ಸಂಘಟನೆ ಪುನಾರಚನೆ ಬಗ್ಗೆ ಪ್ರಸ್ತಾಪವಿತ್ತು.
ಇದರ ಸಂಬಂಧ ಅಧ್ಯಕ್ಷ ದಿನೇಶ್ಗುಂಡೂರಾವ್ ಅವರು ಸಹ ಇತ್ತೀಚೆಗೆ ನೂತನ ಪದಾಧಿಕಾರಿಗಳ ಆಯ್ಕೆ ಸಂಬಂಧಪಟ್ಟಂತೆ ಮೂರ್ನಾಲ್ಕು ಸುತ್ತಿನ ಸಭೆಯನ್ನು ಸಹ ನಡೆಸಿದ್ದರು.
ಮುಖಂಡರ ಬೆಂಬಲಿಗರು ಎಂಬ ಕಾರಣಕ್ಕೆ ಪದಾಧಿಕಾರಿಗಳಾಗಿ ನೇಮಿಸದೆ ಪಕ್ಷ ಸಂಘಟನೆಗಾಗಿ ಶ್ರಮಿಸುವ ಮುಖಂಡರನ್ನು ಪದಾಧಿಕಾರಿ ಹುದ್ದೆಗೆ ನಿಯೋಜಿಸುವ ಚಿಂತನೆ ನಡೆದಿದೆ ಎನ್ನಲಾಗಿದೆ.
More Articles
By the same author
Related Articles
From the same category
ಎಐಸಿಸಿ ತೆಗೆದುಕೊಂಡಿರುವ ನಿರ್ಧಾರ ಸ್ವಾಗತ ಆದರೆ ಇದು ಎಲೆಕ್ಷನ್ಸ್ ಮುಂಚಿತವಾಗಿ ತೆಗೆದುಕೊಂಡಿದ್ದಾರೆ ಈ ಪರಿ ಕಾಂಗ್ರೆಸ್ ಸರ್ಕಾರ ಸೋಲನ್ನು ಕಾಣುತ್ತಿರಲಿಲ್ಲ ಒಂದು ಮುಖ್ಯವಾದ ಅಂಶವೇನೆಂದರೆ OBCಯ ಜಾತಿಗಳ ಆಗಿರುವ ಅತಿಹೆಚ್ಚು ಮತಗಳು ಇರುವ ಒಂದು ವರ್ಗ ಇದನ್ನು ಬಹಳಷ್ಟು ಜನ ಹಿರಿಯ ನಾಯಕರು ಹಿರಿಯ ಚಿಂತಕರು ಅವರ ಬಗ್ಗೆ ಕಾಳಜಿ ವಹಿಸದೆ ಹಾಗೆ ತಾಲೂಕಿನ ಎಂಎಲ್ಎಗಳು ಅವಶ್ಯಕವಾಗಿ ಅವರನ್ನು ಬಳಸಿಕೊಂಡು ನಂತರ ಒಬಿಸಿಯ ನಾಯಕರು ಹಾಗೂ ಕಾರ್ಯಕರ್ತರನ್ನು . ಹಾಗೂ ಅವರು ಹೇಳುವ ಮಾತುಗಳಿಗೆ ಸ್ಪಂದನೆ ಇಲ್ಲದಂತಾಗಿದೆ ಆದ್ದರಿಂದ ಬಾಳಷ್ಟು ನೋವು ತುಂಬಿಕೊಂಡ ಕಾರ್ಯಕರ್ತರು ಭಾರಿ ಬದಲಾವಣೆಗಳು ಒಳಗೊಂಡು ಕೋಲಾರ ಜಿಲ್ಲೆಯ ಲೋಕಸಭಾ ಸದಸ್ಯರಾದ ಕೆಎಚ್ ಮುನಿಯಪ್ಪ ರವರ ಸೋಲಿಗೆ ಕಾರಣ ಖಂಡಿತ ಕಾಂಗ್ರೆಸನ್ನು ಕಟ್ಟಿ ಬೆಳೆಸ ಬೇಕಾಗಿರುವ ನಾಯಕರು ತಮ್ಮ ಸ್ವಾರ್ಥಕ್ಕಾಗಿ ನಿಜವಾದ ಕಾರ್ಯಕರ್ತರನ್ನು ಗುರ್ತಿಸಿದೆ ಇರುವುದೇ ಕಾಂಗ್ರೆಸ್ ಸೋಲಿಗೆ ಕಾರಣ ::ಇಂತಿ- ಓಬಿಸಿ ಉಪಾಧ್ಯಕ್ಷ ಕೋಲಾರ ಜಿಲ್ಲೆ ಬಂಗಾರಪೇಟೆ ತಾಲೂಕು ಬಿ .ವಿ. ನಾಗರಾಜ್