ನನ್ನ ಬಳಿ ಸತ್ಯವಿದೆ ಬಲವಿಲ್ಲ
ನನ್ನ ಬಳಿ ತತ್ವವಿದೆ, ಅಧಿಕಾರವಿಲ್ಲ
ನಿನ್ನ ಬಳಿ ಅಧಿಕಾರವಿದೆ ಆದರೆ ತತ್ವವಿಲ್ಲ
ನೀನು ನೀನಾಗಿ
ನಾನು ನಾನಾಗಿ
ರಾಜಿಯಾಗುವ ಪ್ರಶ್ನೆಯೇ ಇಲ್ಲ
ನನ್ನ ಬಳಿ ಸತ್ಯವಿದೆ , ಬಲವಿಲ್ಲ
ನಿನ್ನ ಬಳಿ ಬಲವಿದೆ ಆದರೆ ಸತ್ಯವಿಲ್ಲ
ನೀನು ನೀನಾಗಿ
ಹಾಗೂ ನಾನು ನಾನಾಗಿ
ರಾಜಿಯಾಗುವ ಪ್ರಶ್ನೆಯೇ ಇಲ್ಲ
ಶುರುವಾಗಿಯೇ ಬಿಡಲಿ ಸಮರ
ನನ್ನ ಬುರುಡೆಯನ್ನು ಹೊಸಕಬಹುದು ನೀನು
ಹೋರಾಡುತ್ತೇನೆ ನಾನು
ನನ್ನ ಮೂಳೆಗಳ ಪುಡಿಗಟ್ಟಬಹುದು ನೀನು
ಆಗಲೂ ಹೋರಾಡುತ್ತೇನೆ ನಾನು
ನನ್ನ ಜೀವಂತ ಹುಗಿದುಬಿಡಬಹುದು ನೀನು
ಆದರೂ ಹೋರಾಡುತ್ತೇನೆ ನಾನು
ನನ್ನೊಳಗಿಹುದು ಸತ್ಯದ ಪ್ರವಾಹ
ಹಾಗೆಂದೇ ಹೋರಾಡುತ್ತೇನೆ ನಾನು
ದೇಹದ ಕಣಕಣದ ಬಲವನೆಲ್ಲಾ ಸೇರಿಸಿ
ಹೋರಾಡುವೆ ನಾನು
ದೇಹದ ಉಸಿರಿನ ಕೊನೆಯವರೆಗೂ
ಬಿಡದೇ ಹೋರಾಡುವೆ ನಾನು
ಸುಳ್ಳುಗಳಿಂದಲೇ ಕಟ್ಟಿಕೊಂಡಿರುವ ನಿನ್ನ
ಭದ್ರಕೋಟೆಯ ಬುಡ ಅಲ್ಲಾಡುವವರೆಗೂ
ನಾನು ಹೋರಾಡುತ್ತೇನೆ
ಆ ಸುಳ್ಳುಗಳಿಂದ ನೀನು ಪೂಜಿಸಿದ ದೆವ್ವಗಳು
ನನ್ನ ಸತ್ಯದೈವದೆದುರು ಮಂಡಿಯೂರುವ ವರೆಗೂ
ಹೋರಾಡುತ್ತೇನೆ ನಾನು
ಮೂಲ: ಸಂಜೀವ್ ಭಟ್
ಕನ್ನಡಕ್ಕೆ: ಹರ್ಷಕುಮಾರ್ ಕುಗ್ವೆ
2 Comments
ಸತ್ಯದ ಪ್ರತಿಪಾದಕರಿಗೆ ಇದು ಬಹಳ ಕಷ್ಟದ ಕಾಲ.
Sir i salute you 🇮🇳🇮🇳🙋♂