ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ ನ (ಆರ್ ಬಿ ಐ) ಉಪ-ಗವರ್ನರ್ ವಿರಾಳ್ ಆಚಾರ್ಯ ಅವರು ತಮ್ಮ ಅಧಿಕಾರದ ಅವಧಿ ಮುಗಿಯುವ 6 ತಿಂಗಳಿಗೂ ಮೊದಲೇ ರಾಜೀನಾಮೆ ಸಲ್ಲಿಸಿದ್ದಾರೆ.
ಜನವರಿ 2017ರಲ್ಲಿ ಆರ್ ಬಿ ಐ ಸೇರಿದ ಆಚಾರ್ಯ ಅವರು ಇದೀಗ ಆರ್ ಬಿ ಐ ಉಪ-ಗವರ್ನರ್ ಸ್ಥಾನಕ್ಕೆ ನೀಡಿರುವ ರಾಜೀನಾಮೆಯ ನಂತರದ ತಮ್ಮ ಮುಂದಿನ ಹಾದಿಯ ಬಗ್ಗೆ ನಿಖರವಾಗಿ ಏನನ್ನೂ ಬಹಿರಂಗಪಡಿಸಿಲ್ಲವಾದರೂ, ಅವರು ಪುನಃ ಅಮೆರಿಕದಲ್ಲಿ ಪ್ರಾಧ್ಯಾಪಕ ಹುದ್ದೆಗೆ ಮರಳಬಹುದೆಂದು ನಿರೀಕ್ಷಿಸಲಾಗಿದೆ.
ಅವಧಿಗೂ ಮುನ್ನವೇ ಆರ್ ಬಿ ಐ ಗವರ್ನರ್ಗಳು ರಾಜೀನಾಮೆ ನೀಡುವುದು ಹೊಸದೇನಲ್ಲ. ಈ ಹಿಂದೆ ಡಿಸೆಂಬರಿನಲ್ಲಿ ಗವರ್ನರ್ ಉರ್ಜಿತ್ ಪಟೇಲ್ ವೈಯಕ್ತಿಕ ಕಾರಣಗಳನ್ನು ನೀಡಿ ಒಂಭತ್ತು ತಿಂಗಳ ಮೊದಲೇ ರಾಜೀನಾಮೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.
ಈ ಹಿಂದೆ ಗವರ್ನರ್ ಶಕ್ತಿಕಾಂತ್ ದಾಸ್ ಅವರ ನೇತೃತ್ವದ ಹಣಕಾಸು ನೀತಿ ಸಮಿತಿ (ಎಂಪಿಸಿ) ಸಭೆಯಲ್ಲಿ ಆಚಾರ್ಯ ಅವರು ರೆಪೋ ದರ ಕಡಿತ ವಿಚಾರದಲ್ಲಿ ಭಿನ್ನ ನಿಲುವು ತಳೆದಿದ್ದರು. ಈ ಹಿಂದಿನ ಎಂಸಿಸಿ ಸಭೆಯಲ್ಲಿ ವಿರಾಳ್ ಆಚಾರ್ಯ, ಚೇತನ್ ಘಾಟ್ಗೆ ಯಥಾಸ್ಥಿತಿಯನ್ನು ಕಾಯ್ದುಕೊಳ್ಳುವ ನಿರ್ಧಾರವನ್ನು ಬೆಂಬಲಿಸಿದ್ದರು.

ಜೂನ್ ಮೊದಲ ವಾರದಲ್ಲಿ ನಡೆದಿದ್ದ ಎಂಸಿಸಿ ಸಭೆಯಲ್ಲಿ ಆರ್ಬಿಐನ ಆರು ಮಂದಿ ಸದಸ್ಯರಾದ ರವೀಂದ್ರ ದೋಲಾಕಿಯ, ಪಾಮಿ ದುವಾ, ಮೈಖೇಲ್ ಪಾತ್ರ, ಗವರ್ನರ್ ಶಕ್ತಿಕಾಂತ್ ದಾಸ್, ಉಪ-ಗವರ್ನರ್ ವಿರಾಳ್ ಆಚಾರ್ಯ, ಚೇತನ್ ಘಾಟ್ಗೆ ಎಲ್ಲರೂ ಸರ್ವಾನುಮತದಿಂದ ರೆಪೋ ದರವನ್ನು ಇಳಿಸುವ ನಿರ್ಧಾರವನ್ನು ಬೆಂಬಲಿಸಿದ್ದರು.
ಹಣಕಾಸು ನೀತಿ ಸಂಬಂಧ ಕೆಲವೊಂದು ವಿಚಾರಗಳ ಬಗ್ಗೆ ಆರ್ ಬಿ ಐ ನ ಗವರ್ನರ್ ಶಕ್ತಿಕಾಂತ್ ದಾಸ್ ಅವರ ಜೊತೆ ಆಚಾರ್ಯ ಅವರು ಭಿನ್ನಾಭಿಪ್ರಾಯ ಹೊಂದಿದ್ದರು ಎಂದು ವರದಿಯಾಗಿದೆ.
ಆಚಾರ್ಯ ಅವರು 1995ರಲ್ಲಿ ಐಐಟಿ ಮುಂಬೈನಿಂದ ಕಂಪ್ಯೂಟರ್ ಸೈನ್ಸ್ ನಲ್ಲಿ ಬಿ ಟೆಕ್ ಪದವಿ ಗಳಿಸಿದ ಬಳಿಕ 2001ರಲ್ಲಿ ನ್ಯೂಯಾರ್ಕಿನ ಸ್ಟರ್ನ್ ವಿಶ್ವವಿದ್ಯಾಲಯದಲ್ಲಿ ಪಿಎಚ್ಡಿ ಪೂರ್ಣಗೊಳಿಸಿದರು.
ಸ್ಟರ್ನ್ ಗೆ ಸೇರುವ ಮೊದಲು ಲಂಡನ್ ಬಿಸಿನೆಸ್ ಸ್ಕೂಲಿನಲ್ಲಿ 2001-2008 ವರೆಗೆ ಇದ್ದ ಆಚಾರ್ಯ ಅವರು, ಕಾಲರ್ ಇನ್ಸ್ಟಿಟ್ಯೂಟ್ ಆಫ್ ಪ್ರೈವೇಟ್ ಈಕ್ವಿಟಿ ಎಲ್ಬಿಎಸ್ ನಲ್ಲಿ 2007-09ರ ಅವಧಿಯಲ್ಲಿ ಅಕಾಡೆಮಿಯ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು.
More Articles
By the same author