ಶಿವಮೊಗ್ಗ: ಸರ್ಕಾರದ ಉದ್ದೇಶಿತ ಶರಾವತಿ ನದಿನೀರನ್ನು ಬೆಂಗಳೂರಿಗೆ ಹರಿಸುವ ಯೋಜನೆ ವಿರೋಧಿಸಿ *ಶರಾವತಿ ಉಳಿಸಿ* ಜನಾಂದೋಲನಕ್ಕೆ ಈಗಾಗಲೆ ಹೋರಾಟ ಸಮಿತಿ ಅಸ್ತಿತ್ವಕ್ಕೆ ಬಂದಿದೆ.
ಜಿಲ್ಲೆಯಾದ್ಯಂತ ಹೋರಾಟವನ್ನು ಎಲ್ಲರನ್ನು ಒಳಗೊಂಡಂತೆ ತಾರ್ಕಿಕ ಅಂತ್ಯದವರೆಗೂ ಮುನ್ನೆಡೆಸಲು ತಾಲ್ಲೂಕುವಾರು ಸಮಾಲೋಚನಾ ಸಭೆಗಳನ್ನು ನಡೆಸಲಾಗುತ್ತಿದೆ.
ಶಿವಮೊಗ್ಗ ತಾಲ್ಲೂಕಿನ ಸಮಾಲೋಚನಾ ಸಭೆಯು ನಾಳೆ ( ದಿ.೨೪) ಬೆಳಿಗ್ಗೆ 11-30 ಕ್ಕೆ ಶಿವಮೊಗ್ಗ ನಗರದ ಪತ್ರಿಕಾಭವನದಲ್ಲಿ ಆಯೋಜಿಸಲಾಗಿದೆ.
ಸಭೆಯ ಅಧ್ಯಕ್ಷತೆಯನ್ನು ಹೋರಾಟ ಸಮಿತಿ ಅಧ್ಯಕ್ಷರಾದ ಸಾಹಿತಿ ನಾ.ಡಿಸೋಜ ವಹಿಸುವರು. ಚರಕ ಪ್ರಸನ್ನ ಸೇರಿದಂತೆ ಪ್ರಮುಖರು ಭಾಗವಹಿಸಲಿದ್ದಾರೆ.
ತಾಲ್ಲೂಕಿನ ಪ್ರಗತಿಪರ,ರೈತ, ಜನಪರ ಸಂಘಟನೆಗಳ ಮುಖಂಡರುಗಳು ,ರಾಜಕೀಯ ಪಕ್ಷಗಳ ಪ್ರಮುಖರು, ವಿದ್ಯಾರ್ಥಿ ಮುಖಂಡರು, ರಂಗಭೂಮಿ,ಸಾಹಿತ್ಯ ಕ್ಷೇತ್ರದ ಪ್ರಮುಖರು ಭಾಗವಹಿಸಬೇಕಾಗಿ ಹೋರಾಟದ ಸಂಚಾಲನಸಮಿತಿ ಕೋರಿದೆ.