ಬ್ರೇಕಿಂಗ್ ಸುದ್ದಿ

ಘೋಷಣೆಗಳ ಕೂಗಾಟದ ನಡುವೆ ಪಾರ್ಲಿಮೆಂಟಿನಲ್ಲಿ ಪ್ರಮಾಣವಚನ ಎಂಬ ಪ್ರಹಸನ

ಮರ್ಯಾದಾಪುರುಷನನ್ನು ಸಂತೆಯ ಸರಕನ್ನಾಗಿಸಿರುವುದು ಶೋಚನೀಯ. ಧರ್ಮ, ದೇವರನ್ನು ನಂಬುವುದು, ಬಿಡುವುದು ಅವರವರ ನಂಬಿಕೆಗೆ ಬಿಟ್ಟ ವಿಷಯ. ಅಲ್ಲಾ, ಶಿವ, ರಾಮ, ಏಸು ಅವರವರ ವೈಯಕ್ತಿಕ ನಂಬಿಕೆಗೆ ಮಾತ್ರ ಸೀಮಿತವಾಗಿವೆ. ಅವು ಪಾರ್ಲಿಮೆಂಟಿನಲಿ ಘೋಷಣೆಗಳಾಗಬಾರದು. ಪ್ರಮಾಣವಚನ ಸ್ವೀಕಾರ ಸಂದರ್ಭವು ಧರ್ಮಯುದ್ಧದ ರಣಭೂಮಿಯಾಗಿ ಮಾರ್ಪಟ್ಟಿದ್ದಂತೂ ನಿಜ, ಎಂಬ ಆತಂಕ ವ್ಯಕ್ತಪಡಿಸುತ್ತಾರೆ ಹಿರಿಯ ಸಾಮಾಜಿಕ ಹೋರಾಟಗಾರ್ತಿ ಮತ್ತು ನಾಡಿನ ಹೆಸರಾಂತ ಸಾಹಿತಿ ಡಾ ಕೆ ಷರೀಫಾ.

leave a reply