ನಿಮ್ಮಪ್ಪನಿಗೆ ಸೇರಿದ್ದಲ್ಲ ಹಿಂದೂಸ್ತಾನ…
ಅವರು ವಿರೋಧಿಸಿದರೇನಂತೆ
ವಿರೋಧಿಸಲಿ ಬಿಡಿ
ಅದೇ ಬದುಕಿನ ಕೊನೆಯಲ್ಲವಲ್ಲಾ.
ಈ ರಾತ್ರಿಯಲಿ ಕಾಣುತಿರುವುದೆಲ್ಲಾ
ಬರೀ ಹೊಗೆಯೇ, ಇದು ಆಗಸವಲ್ಲಾ.
ಓ! ಬೆಂಕಿ ಹೊತ್ತಿದೆ ಎಂದಾದರೆ
ಇಲ್ಲಿರುವ ಮನೆಗಳೆಲ್ಲಾ ದಹಿಸಿಹೋಗುತ್ತವೆ ನೋಡಿ
ಆದರೆ ಆ ಮನೆಗಳಾವುವೂ ನನ್ನದಾಗಿಲ್ಲವಲ್ಲಾ.
ನನ್ನ ಬಾಯಿಂದ ಹೊರಹೊಮ್ಮುವ ಮಾತಿಗೆಲ್ಲಾ
ಇದೆ ಸತ್ಯಕ್ಕಿರುವ ಶಕ್ತಿ ಸಾಮರ್ಥ್ಯ
ನನ್ನ ಬಾಯಲ್ಲಿರುವ ನಾಲಗೆಯಂತೂ
ನಿನ್ನದಾಗಿಲ್ಲವಲ್ಲಾ.
ನನಗೂ ಗೊತ್ತು ವೈರಿ ಕಡಿಮೆಯೇನಲ್ಲ
ಆದರೂ ಅವರು ಧರಿಸಿದ ಬದುಕು
ನನ್ನಷ್ಟು ಸರಳವಲ್ಲ.
ಇಂದು ಗದ್ದುಗೆ ಏರಿಹ ಸಾಹೇಬರಿಗೆ
ನಾಳೆಯೂ ಅದೇ ಶಾಶ್ವತವೇನಲ್ಲ
ಅವರೀಗ ಅಲ್ಲಿ ಬಾಡಿಗೆಗೆ ಬಂದಿಹರಷ್ಟೇ
ಅದೇ ಅವರ ದಿವ್ಯ ಹಕ್ಕಲ್ಲವಲ್ಲಾ.
ನಿಮ್ಮಪ್ಪನಿಗೆ ಸೇರಿದ್ದಲ್ಲ ಹಿಂದೂಸ್ತಾನ
ಇದು ನನ್ನಪ್ಪನದ್ದೂ ಅಲ್ಲ
ಈ ಮಣ್ಣಲಿ ಬೆರೆತುಹೋಗಿದೆ
ಎಲ್ಲರಾ ನೆತ್ತರು…
ಮೂಲ: ಡಾ. ರಾಹತ್ ಇಂದೋರಿ
ಕನ್ನಡಕ್ಕೆ: ಜ್ಯೋತಿ ಎ.
ತುಂಬಾ ಚೆನ್ನಾಗಿದೆ..
ಆದರೆ, ಕೊನೆಯ ಸಾಲನ್ನು ಹಾಗೇ ಉಳಿಸಿಕೊಳ್ಳಬೇಕಿತ್ತು.. ನಮ್ಮಪ್ಪನದ್ದು ಅಲ್ಲ ಎನ್ನುವುದು ಬೇಡವಾಗಿತ್ತು..
“ಯಾರಪ್ಪನದೂ ಅಲ್ಲ ಹಿಂದೂಸ್ತಾನ” ಎನ್ನಬಹುದು.