ಅಂತೂ ಕಾನೂನು ಹೋರಾಟದಲ್ಲಿ ಹಿರಿಯ ಸಾಹಿತಿ ಸಾರಾ ಅಬುಬಕ್ಕರ್ ಪರ ನ್ಯಾಯ ದೇವತೆ ಒಲಿದಿದ್ದಾಳೆ.
ಲಂಕೇಶ್ ಪತ್ರಿಕೆಯಲ್ಲಿ ಧಾರವಾಹಿಯಾಗಿ ಪ್ರಕಟವಾಗುತ್ತಿದ್ದ ಹಾಗೂ ಸಾಕಷ್ಟು ಜನಮನ್ನಣೆಯೊಂದಿಗೆ ಪ್ರಖ್ಯಾತವಾಗಿದ್ದ ಸಾರಾ ಅಬುಬಕ್ಕರ್ ಅವರ “ಚಂದ್ರಗಿರಿಯ ತೀರದಲ್ಲಿ ” ಕಾದಂಬರಿಯ ಕಥಾವಸ್ತುವನ್ನು ಕದ್ದು ‘ಬ್ಯಾರಿ’ ಎಂಬ ಚಲನಚಿತ್ರವನ್ನು ಅಲ್ತಾಫ಼್ ಎನ್ನುವವರು ತಯಾರಿಸಿದ್ದಾರೆ ಎಂದು ಸಾರಾ ಅಬುಬಕ್ಕರ್ 2011ರಲ್ಲಿ ಕೋರ್ಟ್ ಮೆಟ್ಟಿಲೇರಿದ್ದರು. ಆ ಸಿನಿಮಾ 59 ನೇ ರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಸ್ವರ್ಣ ಕಮಲ ಪ್ರಶಸ್ತಿಯನ್ನೂ ಪಡೆದಿತ್ತು.
“ಬ್ಯಾರಿ” ಸಿನಿಮಾ ಬ್ಯಾರಿ ಭಾಷೆಯಲ್ಲಿ ತಯಾರಾದ ಮೊದಲ ಸಿನಿಮಾ. ಈ ಸಿನಿಮಾದ ಕಥೆ-ಚಿತ್ರಕಥೆ ಬರೆದ ಅಲ್ತಾಫ಼್ ಸ್ವತಃ ಆ ಸಿನಿಮಾದಲ್ಲಿ ನಟಿಸಿದ್ದರು ಕೂಡ.
ಕೆ.ಪಿ. ಸುವೀರನ್ ನಿರ್ದೇಶನದಲ್ಲಿ ಮೂಡಿ ಬಂದ ಈ ಚಿತ್ರದಲ್ಲಿ ಲೇಖಕರ ಗಮನಕ್ಕೂ ತರದಂತೆ ಕೃತಿಚೌರ್ಯ ಮಾಡಲಾಗಿತ್ತು.
ಇದೀಗ ಮಂಗಳೂರಿನ ಮೂರನೆ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ಸಾರಾರವರಿಗೆ ಸಿನಿಮಾ ತಂಡ ಎರಡು ಲಕ್ಷ ಪರಿಹಾರ ಹಣ ನೀಡಬೇಕೆಂದು ಆದೇಶ ನೀಡುವುದರ ಜೊತೆಗೆ ಸಿನಿಮಾವನ್ನು ಇನ್ನೆಲ್ಲೂ ಪ್ರದರ್ಶನ ಮಾಡದಂತೆ ತೀರ್ಪು ನೀಡಿದೆ.