ಫೇಸ್ಬುಕ್ ಪೇಜ್ ಲೋಡ್ ಆಗ್ತಿಲ್ಲ…ವಾಟ್ಸಪ್ನಲ್ಲಿ ಬಂದ ಫೋಟೋ ಡೌನ್ಲೋಡ್ ಆಗ್ತಿಲ್ಲ…ಇನ್ ಸ್ಟಾಗ್ರಾಮ್ ರಿಫ್ರೆಶ್ ಆಗ್ತಿಲ್ಲ…. ಹೌದು, ಇದು ಬುಧವಾರ ಸಂಜೆ ಹಲವರಿಂದ ಕೇಳಿಬರುತ್ತಿರುವ ದೂರುಗಳು.
ರಾತ್ರಿ ಸುಮಾರು 8.30ರ ಬಳಿಕ ಫೇಸ್ಬುಕ್, ವಾಟ್ಸಪ್, ಇನ್ ಸ್ಟಾಗ್ರಾಮ್ ಅಪ್ಲಿಕೇಷನ್ ಗಳು ಭಾಹಶಃ ಸ್ಥಗಿತಗೊಂಡಿದ್ದು, ಫೇಸ್ಬುಕ್ನಲ್ಲಿ ಪೇಜ್ ಲೋಡ್ ಆಗುತ್ತಿಲ್ಲ. ವಾಟ್ಸಪ್ನಲ್ಲಿ ಬಂದ ಚಿತ್ರಗಳು ಡೌನ್ ಲೋಡ್ ಆಗುತ್ತಿಲ್ಲ ಎಂದು ಹಲವರು ಟ್ವೀಟ್ ಮಾಡಿ ತಮ್ಮ ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ಅಮೆರಿಕ, ಲಂಡನ್, ಫ್ಲೋರಿಡಾ, ಬರ್ಲಿನ್, ದಕ್ಷಿಣ ಅಮೆರಿಕ ಮುಂತಾದ ದೇಶಗಳಲ್ಲೂ ಫೇಸ್ಬುಕ್, ವಾಟ್ಸಪ್, ಇನ್ ಸ್ಟಾಗ್ರಾಮ್ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಭಾರತದಲ್ಲಿಯೂ ಸಂಜೆ 7.30ರ ನಂತರ ಈ ಮೂರೂ ಸಾಮಾಜಿಕ ಜಾಲತಾಣಗಳು ಸ್ಥಗಿತಗೊಂಡಿವೆ. ಮೊದಲು ಫೇಸ್ಬುಕ್ ಮತ್ತು ಇನ್ ಸ್ಟಾಗ್ರಾಮ್ ಕಾರ್ಯನಿರ್ವಹಿಸದೆ ಹೋಯಿತು. ಆನಂತರ ಇನ್ ಸ್ಟಾಗ್ರಾಮ್ ಅವುಗಳನ್ನು ಹಿಂಬಾಲಿಸಿತು. ಇನ್ ಸ್ಟಾಗ್ರಾಮ್ನಲ್ಲಿ ಪೋಸ್ಟ್ಗಳು ರಿಫ್ರೆಶ್ ಆಗುತ್ತಿಲ್ಲ ಎಂಬ ದೂರುಗಳು ವ್ಯಾಪಕವಾಗಿ ಕೇಳಿಬರುತ್ತಿವೆ.
ಈ ಮೂರೂ ಸೇವೆಗಳನ್ನು ಒದಗಿಸುವ ಫೇಸ್ ಬುಕ್ ನ ಸರ್ವರ್ ಗಳು ಸ್ಥಗಿತಗೊಂಡ ಪರಿಣಾಮವೇ ಜಾಗತಿಕ ಮಟ್ಟದಲ್ಲಿ ತಲೆದೋರಿರುವ ಈ ತಾಂತ್ರಿಕ ಸಮಸ್ಯೆ ಎನ್ನಲಾಗಿದೆ. ಈ ತೊಂದರೆ ದಕ್ಷಿಣ ಅಮೆರಿಕ ಮತ್ತು ಯುರೋಪ್ ದೇಶಗಳಲ್ಲಿ ಅತಿ ಹೆಚ್ಚಾಗಿ ಬಾಧಿಸುತ್ತಿದೆ ಎಂದೂ ಹೇಳಲಾಗುತ್ತಿದೆ.
ಆದರೆ ಫೇಸ್ ಬುಕ್ ನ ಅಧಿಕಾರಿಗಳಾಗಲೀ ಆಗಲೀ ವಾಟ್ಸಪ್ ಸಂಸ್ಥೆಗೆ ಸಂಬಂಧಿಸಿದವರಾಗಲೀ ಈ ತಾಂತ್ರಿಕ ಸಮಸ್ಯೆಯ ಬಗ್ಗೆ ಈವರೆಗೂ ಏನೂ ಹೇಳಿಲ್ಲ. ತಾಂತ್ರಿಕ ತೊಂದರೆಗಳನ್ನು ಪತ್ತೆಹಚ್ಚುವ ಜಾಲತಾಣಗಳು ಮಾತ್ರ ಎಲ್ಲೆಡೆ ಹೆಚ್ಚೆಚ್ಚು ಸಮಸ್ಯೆಗಳನ್ನು ಗುರುತಿಸತೊಡಗಿವೆ.