ಪುತ್ತೂರಿನ ಕಾಲೇಜು ವಿದ್ಯಾರ್ಥಿಯೋರ್ವಳನ್ನು ಐವರು ಹುಡುಗರು ಔಟಿಂಗ್ ಗೆಂದು ಕರೆದೊಯ್ದು ಅಮಲು ಪದಾರ್ಥ ತಿನ್ನಿಸಿ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಪ್ರಕರಣ ಬಯಲಾಗಿದೆ. ಈ ಪ್ರಕರಣ ಹಲವು ತಿರುವುಗಳತ್ತವೂ ಸಾಗಿದೆ. ಅತ್ಯಾಚಾರ ನಡೆಸಿದ ಹುಡುಗರು ಬಿಜೆಪಿ – ಸಂಘಪರಿವಾರದ ಅಂಗ ಸಂಘಟನೆಯಾದ ಎಬಿವಿಪಿಗೆ ಸೇರಿದವರು ಎಂಬುದು ಅಲ್ಲೆಗೆಳೆಯಲಾಗದಷ್ಟರ ಮಟ್ಟಿಗೆ ನಿಚ್ಚಳವಾಗಿದೆ.
ಭಾರತೀಯ ಸಂಸ್ಕೃತಿ, ಸಂಸ್ಕಾರದ ಹೆಗ್ಗಳಿಕೆ, ಅದರ ಉಳಿವು, ಉತ್ಥಾನಗಳಿಗಾಗಿಯೇ ಹೋರಾಡುವ ಸಂಘಟನೆಯ ಕಾಲಾಳುಗಳು ಇಂತಹದ್ದೊಂದು ಅಸಂಸ್ಕಾರ, ಅಸಂಸ್ಕೃತಿಯ ಕೃತ್ಯ ನಡೆಸಿರುವುದು ಭಾರತ ಮಾತೆಯ(?) ದೌರ್ಭಾಗ್ಯ.
1996-97 ರಲ್ಲಿ ಶಿವಮೊಗ್ಗದಲ್ಲಿ ನಡೆದ ಇಡೀ ರಾಜ್ಯದ ಗಮನ ಸೆಳೆದ ಎರಡು ಪ್ರಮುಖ ಪ್ರತ್ಯೇಕ ಘಟನೆಗಳು – ಮೊದಲನೆಯದ್ದು, ಆರು ವರ್ಷದ ಕೂಸು (ಸ್ವಪ್ನ ಪ್ರಕರಣ) ಮತ್ತು ಎರಡನೆಯದ್ದು, 23 ವರ್ಷದ ಎಬಿವಿಪಿ ಯುವನಾಯಕಿಯ (ಗೌಪ್ಯತೆ ದೃಷ್ಟಿಯಿಂದ ಹೆಸರು ಹೇಳಲಾರೆ) ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣ.
ಸ್ವಪ್ನ ಪ್ರಕರಣದ ಬಗ್ಗೆ ಇನ್ನೊಮ್ಮೆ ಬರೆಯುತ್ತೇನೆ. ಈಗ ಎರಡನೆಯ ಪ್ರಕರಣದ ಕುರಿತು ಹೇಳುತ್ತೇನೆ.
ಅದೊಂದು ದಿನ ಶಿವಮೊಗ್ಗದ ಕೆಮ್ಮಣ್ಣುಗುಂಡಿ ಅಬ್ಬೆ ಫಾಲ್ಸ್ ನಲ್ಲಿ ಯುವ ವಿದ್ಯಾರ್ಥಿನಿಯೊಬ್ಬಳ ಹೆಣ ತೇಲುತ್ತಿತ್ತು. ಎಬಿವಿಪಿ ಶಿವಮೊಗ್ಗ ಸಂಘಟನೆಯ ಮುಂಚೂಣಿ ನಾಯಕಿಯಾಗಿದ್ದ ಆಕೆ ಬದುಕಿದ್ದಿದ್ದರೆ ಬಹುಶಃ ರಾಜ್ಯ ರಾಜಕಾರಣದಲ್ಲಿ ಪ್ರಭಾವಿ ಮಹಿಳಾ ನಾಯಕಿ ಆಗಿರುತ್ತಿದ್ದಳೋ ಏನೋ?! ಆದರೆ ಆಕೆಯನ್ನು ಅದೇ ಸಂಘಟನೆಯಲ್ಲೆ ಗುರುತಿಸಿಕೊಂಡಿದ್ದ ಜೊತೆಗಾರರು ಔಟಿಂಗ್ ಗಾಗಿ ಕರೆದೊಯ್ದಿದ್ದರು. ಬೆಳಗಾಗುವುದರೊಳಗೆ ಆಕೆ ಅಬ್ಬೆ ಫಾಲ್ಸ್ ಗುಂಡಿಯಲ್ಲಿ ಹೆಣವಾಗಿ ತೇಲುತ್ತಿದ್ದಳು.
ಹೆಣ್ಣೆತ್ತ ಅಪ್ಪ, ಮಗಳದ್ದು ಅತ್ಯಾಚಾರ – ಹತ್ಯೆ ಎಂದು ದೂರು ನೀಡಿ ನ್ಯಾಯಕ್ಕಾಗಿ ಪರದಾಡಿದರು. ಮೇಲ್ನೋಟಕ್ಕೆ ಅವರು ಹೇಳಿದ್ದು ದಿಟವಾಗಿಯೇ ಖಂಡಿತು. ಆದರೆ ಈ ಪ್ರಕರಣದಲ್ಲಿ ಭಾಗಿಯಾದವರೆಲ್ಲಾ ಎಬಿವಿಪಿ ಕಾರ್ಯಕರ್ತರಷ್ಟೆ ಆಗಿರಲಿಲ್ಲ, ಪ್ರಭಾವಿ ‘ಧಣಿ’ಗಳ, ಬಲಿಷ್ಠ ರಾಜಕೀಯ ನಂಟಿನ ನೆಂಟರೇ ಆಗಿದ್ದರು. ಅಂದು ಜನಪರ ಚಳವಳಿ ಉತ್ತುಂಗದಲ್ಲಿದ್ದ ಮಹಿಳಾ ಜಾಗೃತಿ, ಪ್ರಗತಿಪರ ವಿದ್ಯಾರ್ಥಿ ಸಂಘಟನೆ ಈ ಹೋರಾಟವನ್ನು ತಾರ್ಕಿಕ ಅಂತ್ಯದ ಅಂಚಿಗೆ ತಂದು ನಿಲ್ಲಿಸಿತ್ತು. ಈ ದುಷ್ಕೃತ್ಯ ಇಡೀ ರಾಜ್ಯದ ಗಮನ ಸೆಳೆದಿತ್ತು.
ಇದು ಮುಖ್ಯಮಂತ್ರಿ ಜೆ.ಹೆಚ್. ಪಟೇಲ್ ಅವರ ಸರ್ಕಾರದ ನಿದ್ದೆಗೆಡಿಸಿತ್ತು. ರಾಜಕೀಯ ಬಲ, ಹಣಬಲದ ಮುಂದೆ ಆರೋಪಿಗಳು ನಿರಪರಾಧಿಗಳಾಗಿ ಹೊರಬಂದರು. ಮಗಳ ವಿದ್ಯೆ, ವಿದ್ವತ್ತು, ನಾಯಕತ್ವ ಗುಣ ಕಂಡು ಅಪಾರ ಕನಸುಗಳ ಕಟ್ಟಿಕೊಂಡಿದ್ದ ತಂದೆಯೊಬ್ಬ ಇಂದಿಗೂ ಕಣ್ಣಲ್ಲಿ ಮಸಣವನ್ನೇ ಹೊತ್ತುಕೊಂಡು ತಿರುಗುತ್ತಿದ್ದಾನೆ.
ಬಹುಶಃ ಪುತ್ತೂರಿನ ಘಟನೆ ಮುಂದೊಂದು ದಿನ ಇಂತಹದ್ದೆ ಅಂತ್ಯವನ್ನು ಕಂಡರೂ ಆಶ್ಚರ್ಯಪಡಬೇಕಾಗಿಲ್ಲ.
ಜಾತಿ,ಧರ್ಮದ ಕಾರಣಕ್ಕಾಗಿ ಹಿಂಸೆ, ಗಲಭೆಗಳಿಗಿಳಿದು ಧೀರೋದ್ದಾತ್ತವಾದ ದೇಶಭಕ್ತಿ ಮೆರೆಯುವವರ ಇಂದಿನ ಮೌನ ಸಾರುತ್ತಿರುವ ಸಂದೇಶ ಈ ನಾಡಿನ ಜನರಿಗೆ ಅರ್ಥವಾಗದೆ ಇರಲಾರದು. ಹಿಂದೂತ್ವ – ಭಾರತೀಯ ಸಂಸ್ಕೃತಿಯ ವಕ್ತಾರರು ತಮ್ಮೊಳಗಿನ ಕೊಳಕನ್ನಾದರೂ ತೊಳೆದುಕೊಳ್ಳಬಾರದೇಕೆ?
ಈ ಸಮಾಜ ತನ್ನೊಳಗೊಂದು ಎಚ್ಚರದ ಪ್ರಜ್ಞೆಯೊಂದನ್ನ ಕಾಯ್ದುಕೊಳ್ಳಬೇಕಿದೆ. ಅದು ಸಂಘಟನೆ, ಪಕ್ಷ, ಜಾತಿ, ಧರ್ಮಗಳ ಆಚೆಯ ಮನುಷ್ಯತ್ವದ ಬಯಲಿನಲ್ಲಿ ನಿಂತು. ಅತ್ಯಾಚಾರಿಗಳು ಯಾವುದೇ ಪಕ್ಷ,ಸಂಘಟನೆಗಳಿಗೆ ಸೇರಿದವರೇ ಆಗಿದ್ದರೂ ಅವರು ಅತ್ಯಾಚಾರಿಗಳಷ್ಟೇ. ಈ ನೆಲದಲ್ಲಿ ನ್ಯಾಯದ ರಕ್ಷಣೆಗೆ ನಮ್ಮದೇ ಮಗಳ, ಮಕ್ಕಳ ಭವಿಷ್ಯದ ಬದುಕಿಗಾಗಿ ಎಚ್ಚರದ ದನಿಯೊಂದನ್ನ ನಾಗರಿಕ ಸಮಾಜ ಎತ್ತದೇ ಹೋದರೆ ಬದುಕಿದ್ದೂ ಸತ್ತಂತೆಯೇ…
ಎನ್.ರವಿಕುಮಾರ್ ಟೆಲೆಕ್ಸ್
(ಲೇಖಕರು ಸಾಮಾಜಿಕ ಹೋರಾಟಗಾರರು ಮತ್ತು ಬರಹಗಾರರಾಗಿದ್ದಾರೆ)
2 Comments
ಅತ್ಯಾಚಾರಿ ಯಾವ ಧರ್ಮ,ಜಾತಿ,ಪಕ್ಷದವನಾದರೂ ಆತ ಮನುಷ್ಯನು ಅಲ್ಲ.ಅತ್ಯಾಚಾರಿ ಅತ್ಯಾಚಾರಿ ಅಷ್ಟೇ. ಹಸುಳೆಯಿಂದ ವೃದ್ದೆಯವರೆಗೂ ಒಂದೇ ದೃಷ್ಟಿಯೇ,ಎಷ್ಟೋ ವರ್ಷ ಸಾಕಿದ ಹೆಣ್ಣು ಮಗಳೊಂದನು ಕೆಲವೇ ಗಂಟೆಗಳಲ್ಲಿ ಮುಕ್ಕುವ,ಸಾಯಿಸುವ ಕೃತ್ಯಕ್ಕಿಂತ ಹೇಯ ಯಾವುದಿದೆ,…ಸಕಾಲಿಕ ಲೇಖನ. ನಿಮ್ಮಂತವರ ಲೇಖನಿಯಿಂದಾದರೂ ಸಮಾಜ ಜಾಗೃತವಾಗಲಿ.
….. Athyacharr Deshada Prabhala Piidugu Rajjkeeya Vagii 2014 Rinda Dumukii Bandiide..Hechchutthale Hogiide .. Deshakke Piidugagii HarrddiiKondiide..
…. Yiiduu Rajjkeeya uddeshaDinda Nadeyuthiide Yenno Adarragalu PrachalithaVide.. Yiilliii AropaVadanthe Yelledeyuu Yiide..
….Uttharr Bharath Nalliii..Bharrii KattorraVagii Nadd.diiddu Dakale Helutthade.. Addre Yavude Vicharrne Shikshe Thorrikege Kellvu helike bandrru .. ParrinamaVenilla ..
…. Rajjkeeya Udeshakke Nadediide yendu .. Yella doorida Sangh sanshtheGala dooru ..
…. Rajjkeeya druvviiKarana Helalagutthiilla .. Aaddrre Doorrugalive .. Vondu Vibhagakke .. Yiinnondu Vibhaga .. Poorrva Thayyarrii Nalliii .. Dabbalike Gagii .. Poova siddatheNinda .. Kandu bhandiide Yenno Doorrugalive Yellede..