ಬ್ರೇಕಿಂಗ್ ಸುದ್ದಿ

ಲಜ್ಜೆಗೇಡಿ ಅನರ್ಹ ಶಾಸಕರಿಗೆ ದಿಢೀರ್ ಉಪ ಚುನಾವಣೆಯ ಶಾಕ್!

ಸದ್ಯದ ಉಪ ಚುನಾವಣಾ ಘೋಷಣೆ, ಸ್ಪೀಕರ್ ಆದೇಶದ ವಿರುದ್ಧದ ಅರ್ಜಿ ವಿಚಾರಣೆ ವಿಳಂಬ ಮತ್ತಿತರ ಬೆಳವಣಿಗೆಗಳು ಸದ್ಯಕ್ಕಂತೂ ಅಧಿಕಾರದಾಹಿ ರಾಜಕಾರಣಿಗಳಿಗೆ ಒಂದು ಪಾಠವಾಗಿದ್ದು, ಉಪ ಚುನಾವಣೆಯಲ್ಲಿ ಮತದಾರರು ಕೂಡ ಮತ್ತೊಂದು ಪಾಠ ಕಲಿಸಲು ಸಜ್ಜಾಗಬೇಕಿದೆ. ತೀವ್ರ ಪ್ರವಾಹ ಮತ್ತು ಬರದ ನಡುವೆ ತಾವು ಸಾವು-ಬದುಕಿನ ನಡುವೆ ಸೆಣೆಸುತ್ತಿರುವಾಗ ತಮ್ಮ ಮತ ಪಡೆದು ಗೆದ್ದುಹೋದ ಈ ನಿರ್ಲಜ್ಜರು ಎಲ್ಲಿದ್ದರು? ಯಾವ ಐಷಾರಾಮಿ ರೆಸಾರ್ಟುಗಳಲ್ಲಿ ಮೋಜುಮಸ್ತಿಯಲ್ಲಿ ಮುಳುಗಿದ್ದರು ಎಂಬುದನ್ನು ಮತಗಟ್ಟೆಯ ಮುಂದೆ ನಿಂತಾಗ ಒಮ್ಮೆ ನೆನಸಿಕೊಂಡು ತನ್ನ ತೋರು ಬೆರಳನ್ನು ಮತಯಂತ್ರದ ಗುಂಡಿಯ ಮೇಲೆ ಒತ್ತಬೇಕಿದೆ.

leave a reply