ಕಾಶ್ಮೀರ ಕಣಿವೆಯಲ್ಲಿ ಸೇನೆ ಹಾರಿಸಿದ ಪೆಲೆಟ್…
‘ಸತ್ಯಮೇವ್ ಸಮಾಜದಲ್ಲಿ ಪಡೆದುಕೊಂಡಿದ್ದ ಮನ್ನಣೆಯ ಬಗ್ಗೆ ಅವರಲ್ಲಿ ಅಸೂಯೆ ತುಂಬಿತ್ತು. ಒಬ್ಬ ದಲಿತನಾಗಿ ಇವರೆದುರು ತಲೆ ಎತ್ತಿ ನಡೆಯುತ್ತಾನೆ ಎನ್ನುವುದೇ ಅವರ ಅಸಹನೆಗೆ ಕಾರಣವಾಗಿತ್ತು. ಒಬ್ಬ ದಲಿತನಾದವನು ಅವರ ಮಾತಿಗೆ “ಇಲ್ಲ” ಎಂದು ಹೇಳುವುದನ್ನು ಸಹಿಸಿಕೊಳ್ಳದ ಅವರು ಸತ್ಯಮೇವ್ ಅವರನ್ನು ಕೊಂದಿದ್ದಾರೆRead more...
ಇದೇ ಸಂದರ್ಭಕ್ಕೆ ಕಾಯುತ್ತಿದ್ದ ಚೀನಾ, ಹೊಸ ದಾಳ ಹೂಡಿತು. ರಾಷ್ಟ್ರೀಯ ಭದ್ರತೆಯ ಹೆಸರಿನಲ್ಲಿ ಹೊಸ ಕಾನೂನೊಂದನ್ನು ಜಾರಿಗೆ ತಂದಿತು. ಜೂನ್ 30ಕ್ಕೆ ಚೀನಾದ ನ್ಯಾಷನಲ್ ಕಾಂಗ್ರೆಸ್ ಸರ್ವಾನುಮತದ ಅಂಗೀಕಾರವನ್ನೂ ನೀಡಿತು. ಈ ಕಾನೂನಿನ ಪ್ರಕಾರ ಹಾಂಕಾಂಗ್ ನಲ್ಲಿ ಚೀನಾ ಸರ್ಕಾರ ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಕಚೇರಿಯೊಂದನ್ನು ತೆರೆಯಲಿದೆ. Read more...
ಜನರ ಗುಂಪುಕಟ್ಟಿಕೊಂಡು ಕರೋನಾ ಸೋಂಕಿತೆಯ ಶವ ಸಂಸ್ಕಾರಕ್ಕೆ ಅಡ್ಡಿಪಡಿಸಿದ್ದೇ ಅಲ್ಲದೆ, ಮುಂದೆಯೂ ತಮ್ಮ ಅನುಮತಿ ಇಲ್ಲದೆ ಕರೋನಾ ರೋಗಿಗಳ ಶವ ಸಂಸ್ಕಾರಕ್ಕೆ ಅವಕಾಶ ನೀಡುವುದೇ ಇಲ್ಲ ಎನ್ನುವ ಮೂಲಕ ಕಾನೂನು ಮತ್ತು ಆಡಳಿತಕ್ಕೆ ಸವಾಲು ಹಾಕಿರುವ ಶಾಸಕರ ವಿರುದ್ಧ ದಕ್ಷಿಣಕನ್ನಡ ಜಿಲ್ಲಾಡಳಿತ ಮತ್ತು ರಾಜ್ಯ ಸರ್ಕಾರ ಯಾವ ಕ್ರಮಜರುಗಿಸಲಿದೆ ಎಂಬುದು ಕುತೂಹಲಹುಟ್ಟಿಸಿದೆ.Read more...
ಏಪ್ರಿಲ್ 19ರಂದು ಬೆಂಗಳೂರಿನ ಬಾಪೂಜಿನಗರ ಮತ್ತು ಪಾದರಾಯನಪುರದಲ್ಲಿ ನಡೆಸಿದ ಸೀಲ್ ಡೌನ್ ಹಾಗೂ ಪಾದರಾಯನಪುರದಲ್ಲಿ (ವಾರ್ಡ್ ಸಂಖ್ಯೆ 135) ನಡೆಸಲಾದ ಪುಂಡಾಟಿಕೆಯ ಕುರಿತು ಹೇಳಿಕೆ. (2020 ರ ಏಪ್ರಿಲ್ 19 ರ ರಾತ್ರಿ ವೇಳೆಯಲ್ಲಿ ಬೆಂಗಳೂರಿನ ಪಾದರಾಯನಪುರದಲ್ಲಿ ಕೊವಿಡ್-19ಕ್ಕೆ ಸಂಬಂಧಿಸಿದಂತೆ ಎರಡನೆಯ ಸಂಪರ್ಕಿತರನ್ನು ಕ್ವಾರಂಟೀನ್ಗೆ ಕರೆದೊಯ್ಯುವ ವಿಚಾರದಲ್ಲಿ ಘರ್ಷಣೆ ನಡೆದು, ಕೆಲ ಸ್ಥಳೀಯರು ಪುಂಡಾಟಿಕೆಯನ್ನೂ ನಡೆಸಿದ್ದರು. ಈ ಸಂಬಂಧ ಈಗಾಗಲೇ ಹಲವರನ್ನು ಬಂಧಿಸಲಾಗಿದೆ. ಆ ದಿನದಂದು ಆಶಾಕಾರ್ಯಕರ್ತೆಯರ ಮೇಲಾಗಲೀ, ಪೊಲೀಸರ ಮೇಲಾಗಲೀ ಯಾವುದೇ ಹಲ್ಲೆ ನಡೆಯಲಿಲ್ಲ ಎಂದು ಬಿಬಿಎಂಪಿ ಆಯುಕ್ತರಾದ ಅನಿಲ್ಕುಮಾರ್ ಮತ್ತು ಪೊಲೀಸ್ ಕಮಿಶನರ್ ಭಾಸ್ಕರ್ ರಾವ್ ಮಾಧ್ಯಮಗಳಿಗೆ ಸ್ಪಷ್ಟವಾಗಿ ತಿಳಿಸಿದ್ದರು. ಆದರೂ ಇಡೀ ಘಟನೆಯ ಸುತ್ತ ಕೋಮುಪೂರ್ವಾಗ್ರಹಗಳು ಉಂಟಾಗುವ ರೀತಿಯಲ್ಲಿ ಬಿಂಬಿಸಲಾಗಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಹಲವಾರು ನಾಗರಿಕ ಸಮಾಜದ ಸಂಘಟನೆಗಳು ಮತ್ತು ವ್ಯಕ್ತಿಗಳು ನೀಡಿರುವ ಪತ್ರಿಕಾ ಹೇಳಿಕೆಯನ್ನು ಇಲ್ಲಿ ಪ್ರಕಟಿಸುತ್ತಿದ್ದೇವೆ- ಸಂ) ಈ ಕೆಳಗೆ ಸಹಿ ಮಾಡಿರುವ ನಾವು ಏಪ್ರಿಲ್ 19, 2020ರಂದು ಬೆಂಗಳೂರಿನ ಪಾದರಾಯನಪುರದಲ್ಲಿ ನಡೆದ […]Read more...
ಕರೋನಾ ಸೋಂಕು ಪ್ರಕರಣಗಳ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಸಂಪೂರ್ಣ ಸೀಲ್ ಡೌನ್ ಆಗಿರುವ ಬೆಂಗಳೂರಿನ ಪಾದರಾಯನಪುರದಲ್ಲಿ ಸೋಂಕಿತರ ಸಂಪರ್ಕಕ್ಕೆ ಬಂದಿದ್ದ ವ್ಯಕ್ತಿಗಳನ್ನು ಪ್ರತ್ಯೇಕಿಸಲು(ಕ್ವಾರಂಟೈನ್) ಕರೆತರಲು ಹೋದಾಗ ಬಿಬಿಎಂಪಿ ಸಿಬ್ಬಂದಿ ಹಾಗೂ ಪೊಲೀಸರ ವಿರುದ್ಧವೇ ಪ್ರದೇಶದ ಜನ ತಿರುಗಿಬಿದ್ದ ಘಟನೆ ರಾಜ್ಯಾದ್ಯಂತ ಆತಂಕ ಹುಟ್ಟಿಸಿದೆ. ಘಟನೆಯ ಸಂಬಂಧ ಆರೋಪಿತರ ವಿರುದ್ಧ ಈಗಾಗಲೇ ಸ್ವತಃ ಸಿಎಂ ಯಡಿಯೂರಪ್ಪ, ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ಬೆಂಗಳೂರು ನಗರ ಪೊಲೀಸ್ ಕಮೀಷನರ್ ಕೂಡ ಕಠಿಣ ಕ್ರಮಕ್ಕೆ ಸೂಚನೆ ನೀಡಿದ್ದಾರೆ. ಪ್ರಕರಣದ ತನಿಖೆಯನ್ನು ಸಿಸಿಬಿಗೆ ವಹಿಸಿ ಈಗಾಗಲೇ ಕಮೀಷನರ್ ಆದೇಶವನ್ನೂ ಹೊರಡಿಸಿದ್ದಾರೆ. ಪೊಲೀಸ್ ಬ್ಯಾರಿಕೇಡ್ ಮುರಿದು, ಪೊಲೀಸ್ ಕ್ಯಾಂಪ್ ನಾಶಪಡಿಸಿದ ಮತ್ತು ಸರ್ಕಾರಿ ಸಿಬ್ಬಂದಿಯ ಕರ್ತವ್ಯಕ್ಕೆ ಅಡ್ಡಿಪಡಿಸಿ ಬೆದರಿಕೆ ಹಾಕಿದ ಆರೋಪದ ಮೇಲೆ ಈವರೆಗೆ 60ಕ್ಕೂ ಹೆಚ್ಚು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದಿಷ್ಟು ಘಟನೆ ಮತ್ತು ಘಟನೆಯ ಆಚೀಚೆಯ ವಿವರಗಳು. ಕರೋನಾದಂತಹ ಭೀಕರ ಮಹಾಮಾರಿಯ ವಿರುದ್ಧ ದೇಶಕ್ಕೆ ದೇಶವೇ ಹೋರಾಡುತ್ತಿರುವ ಹೊತ್ತಲ್ಲಿ, ಸೋಂಕಿತರು ಮತ್ತು ಅವರ ಸಂಪರ್ಕಕ್ಕೆ ಬಂದವರು […]Read more...
ನೆರೆ, ಬರದಂತಹ ವಿಷಯದಿಂದ ಹಿಡಿದು ಜಿಎಸ್ ಟಿ ತೆರಿಗೆ ಪಾಲು ಹಂಚಿಕೆಯವರೆಗೆ ರಾಜ್ಯಕ್ಕೆ ಅನ್ಯಾಯವನ್ನೇ ಮಾಡುತ್ತ ಬಂದಿರುವ ಕೇಂದ್ರದ ಬಿಜೆಪಿ ಸರ್ಕಾರ, ಇದೀಗ ಮತ್ತೊಮ್ಮೆ ಕೊರೋನಾದಂತಹದ ಜೀವಕಂಟಕ ಸೋಂಕಿನ ಪರೀಕ್ಷೆಯ ವಿಷಯದಲ್ಲಿಯೂ ರಾಜ್ಯಕ್ಕೆ ದ್ರೋಹ ಬಗೆದಿದೆ. ರಾಜ್ಯಕ್ಕೆ ಬಂದ ರಾಪಿಡ್ ಟೆಸ್ಟಿಂಗ್ ಕಿಟ್ ಗಳನ್ನು ಗುಜರಾತಿಗೆ ಕಳಿಸಲಾಗಿದೆ!Read more...
ಬಹುಶಃ ತಬ್ಲೀಖ್ ಘಟನೆಯನ್ನು ಮುಂದಿಟ್ಟುಕೊಂಡು ಇಡೀ ಮಾಧ್ಯಮ ಮುಸ್ಲಿಮರ ವಿರುದ್ಧದ ವ್ಯವಸ್ಥಿತ ಅಪಪ್ರಚಾರದ ಜಿದಾದಿಗೆ ಇಳಿಯದೇ ಹೋಗಿದ್ದರೆ, ಬಹುಸಂಖ್ಯಾತರನ್ನು ಎತ್ತಿಕಟ್ಟದೇ ಹೋಗಿದ್ದರೆ, ಪರಿಸ್ಥಿತಿ ಇಷ್ಟು ವಿಕೋಪಕ್ಕೆ ಹೋಗುತ್ತಿರಲಿಲ್ಲವೇನೋ. ಆದರೆ, ಧರ್ಮಾಂಧತೆಯ ವಿಷಬೀಜ ಬಿತ್ತಿದ ಬಳಿಕ ಅದು ಈಗ ಕೊಯಿಲಿಗೆ ಬಂದಿದೆ. ಇಡೀ ದೇಶ ಅದಕ್ಕಾಗಿ ಬೆಲೆ ತೆರಬೇಕಾಗಿದೆ.Read more...
ಎನ್ಐಎ ಮುಂದೆ ಶರಣಾಗಲು ಸುಪ್ರೀಂ ಕೋರ್ಟು ನಿಗದಿಪಡಿಸಿದ ಅಂತಿಮ ಗಡುವಿಗೂ ಮುಂಚೆ ಸಾಮಾಜಿಕ ಕಾರ್ಯಕರ್ತ ಆನಂದ ತೇಲ್ತುಂಬ್ದೆ ಭಾರತದ ಜನತೆಗೆ ಒಂದು ಬಹಿರಂಗ ಪತ್ರ ಬರೆದಿದ್ದಾರೆ. ತಮ್ಮ ಈ ಬಂಧನಕ್ಕೆ ಕಾರಣವಾದ ಸರಣಿ ಘಟನೆಗಳ ಕುರಿತು ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. ಆ ಪತ್ರದ ಯಥಾ ರೂಪ ಇಲ್ಲಿದೆ;Read more...
ಹಲವು ಅವಾಂತರಗಳ ನಡುವೆ, ಇದೀಗ ಮತ್ತೆ ಹದಿನೈದು ದಿನಗಳ ಕಾಲ ಲಾಕ್ ಡೌನ್ ಮುಂದುವರಿದಿದೆ. ಜನರ ಸಂಕಷ್ಟಗಳು ಇನ್ನಷ್ಟು ಉಲ್ಬಣಗೊಳ್ಳಲಿವೆ. ಜೀವ ಮತ್ತು ಬದುಕಿನ ನಡುವಿನ ಆಯ್ಕೆಯ ಪ್ರಶ್ನೆ ಸರ್ಕಾರದ್ದಾದರೆ, ಬದುಕೇ ಅಳಿವು-ಉಳಿವಿನ ಹೋರಾಟವಾಗಿರುವ ಜನಸಾಮಾನ್ಯರ ಪಾಲಿಗೆ ಇದು ಹಸಿವಿನ ಮತ್ತು ಅಸಹಾಯಕತೆಯ ದಿನಗಳನ್ನು ರೂಢಿಸುತ್ತಿದೆ.Read more...
Your Name (required)
Your Email (required)
Subject
Your Message
Upload Document