ಬ್ರೇಕಿಂಗ್ ಸುದ್ದಿ

ಪೊಲೀಸರ ನಿಷ್ಠೆ ದೇಶದ ಸಂವಿಧಾನಕ್ಕೋ, ಬಿಜೆಪಿಯ ಕೋಮುವಾದಕ್ಕೋ?

ಒಂದು ಆಡಳಿತ ಪಕ್ಷ, ಒಬ್ಬ ವ್ಯಕ್ತಿ ಮತ್ತು ಒಂದು ಸಿದ್ಧಾಂತಕ್ಕಾಗಿ ಈಗ ಪೊಲೀಸರು ತಮ್ಮ ಮೈಮೇಲಿನ ಖಾಕಿ, ತಲೆಮೇಲಿನ ಲಾಂಛನವನ್ನೂ ಮರೆತು ಶರಣಾದರೆ, ದೇಶದ ಪೊಲೀಸ್ ವ್ಯವಸ್ಥೆಯ ಬಗ್ಗೆ ಜನ ಸಾಮಾನ್ಯರು ಇಟ್ಟಿರುವ ವಿಶ್ವಾಸ ಉಳಿಯುವುದೇ? ತಾವು ನಿಷ್ಠರಾಗಿರಬೇಕಾಗಿದ್ದು ಈ ದೇಶದ ಸಂವಿಧಾನಕ್ಕೆ, ಪ್ರಜಾಪ್ರಭುತ್ವ ವ್ಯವಸ್ಥೆಗೆ ವಿನಃ ಯಾವುದೇ ವ್ಯಕ್ತಿ, ಪಕ್ಷ, ಸಿದ್ಧಾಂತಕ್ಕಲ್ಲ ಎಂಬ ಕನಿಷ್ಠ ವಿವೇಕ ಖಾಕಿಪಡೆಗೆ ಇಲ್ಲದೇ ಹೋಯಿತೆ ಎಂಬ ಪ್ರಶ್ನೆಗಳಿಗೆ ಉತ್ತರ ಕೊಡುವವರು ಯಾರು?

leave a reply